ಶಿಮ್ಲಾ, ಮೇ 26 (DaijiworldNews/AK): ದೇವರೇ ತಮ್ಮಿಂದ ಕೆಲಸ ಮಾಡಿಸುತ್ತಿದ್ದಾನೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಾರೆ. ಬಹುಶಃ ದೇವರು ಅದಾನಿಗಾಗಿ ಕೆಲಸ ಮಾಡುವಂತೆ ಹೇಳಿರಬೇಕು ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದರು.
ಹಿಮಾಚಲ ಪ್ರದೇಶದ ಶಿಮ್ಲಾ, ನಾಹನ್ ಮತ್ತು ಉನಾ ದಲ್ಲಿ ಮಾತನಾಡಿದ ಅವರು, 10 ವರ್ಷಗಳಲ್ಲಿ 22 ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿರುವ ಪ್ರಧಾನಿ ಮೋದಿ ಹಿಮಾಚಲ ಪ್ರದೇಶದ ಮಳೆ ವಿಕೋಪ ಪರಿಹಾರಕ್ಕೆ 9,000 ಕೋಟಿ ರೂ. ನೀಡುತ್ತಿಲ್ಲ. ಹಿಮಾಚಲ ಪ್ರದೇಶಕ್ಕೆ ನೆರವು ಒದಗಿಸುವ ಬದಲು ಇಲ್ಲಿನ ಸರಕಾರದ ಪತನ ಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದರು.
ಇದೇ ವೇಳೆ ದೇಶದ ವಿಮಾನ ನಿಲ್ದಾಣ, ಬಂದರುಗಳನ್ನು ಉದ್ಯಮಿ ಗೌತಮ್ ಅದಾನಿ ಯವರಿಗೆ ಮಾರುತ್ತಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಸರಕಾರ ರದ್ದು ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ 700 ಮಂದಿ ರೈತರು ಅಸುನೀಗಿದ್ದರು. ಅವರಿಗೆ ಕೇಂದ್ರ ಸರಕಾರ ಹುತಾತ್ಮರ ಗೌರವ ನೀಡಿಲ್ಲ ಎಂದರು.