ನವದೆಹಲಿ, ಮೇ.31(DaijiworldNews/AA): ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಷೇರು ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದೇಶ ಉತ್ತಮ ಆರ್ಥಿಕ ವ್ಯವಸ್ಥೆ ಹೊಂದಬೇಕಾದರೆ ದೂರದೃಷ್ಟಿಯ ನಾಯಕತ್ವದ ಅಗತ್ಯವಿದೆ. ಜೂನ್ 4 ರಂದು ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಇದರೊಂದಿಗೆ ದೇಶದಲ್ಲಿ ಷೇರು ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೇಟಿಂಗ್ಸ್ ಸಂಸ್ಥೆ ಎಸ್ ಆಂಡ್ ಪಿ ದೇಶದ ಅರ್ಥ ವ್ಯವಸ್ಥೆ ಬಗ್ಗೆ ನೀಡಿದ ರೇಟಿಂಗ್ಸ್ ದೇಶದ ಆರ್ಥಿಕತೆಗೆ ಶುಭ ಶಕುನವಾಗಲಿದೆ. ಹಣಕಾಸಿನ ವಿವೇಚನೆ, ಮಾಡುವ ವೆಚ್ಚದಿಂದ ಕೇವಲ ಆದಾಯವಲ್ಲ, ಹೆಚ್ಚಿನ ಆಸ್ತಿ ಸೃಷ್ಟಿ ಮಾಡುವ ಜಾಣ್ಮೆ ಹೊಂದಿರುವಂತಹ ನಾಯಕತ್ವ ಪ್ರಮುಖವಾಗುತ್ತದೆ ಎಂದು ಹೇಳಿದ್ದಾರೆ.