ಬೆಂಗಳೂರು, ಜೂ 01(DaijiworldNews/AA): ಲೋಕಸಭಾ ಚುನಾವಣೆಯ ಎಲ್ಲಾ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿದೆ.
ಇಂಡಿಯಾ ಟಿವಿ ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 18 ರಿಂದ 22 ಸ್ಥಾನ, ಜೆಡಿಎಸ್ಗೆ 1 ರಿಂದ 3 ಸ್ಥಾನ, ಹಾಗೂ ಕಾಂಗ್ರೆಸ್ಗೆ 4 ರಿಂದ 8 ಸ್ಥಾನ ದೊರೆಯಲಿದೆ ಎಂದು ತಿಳಿಸಿದೆ.
ಪೋಲ್ ಸ್ಟ್ರ್ಯಾಟ್ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 18 ಸ್ಥಾನ, ಜೆಡಿಎಸ್ಗೆ 2 ಸ್ಥಾನ, ಕಾಂಗ್ರೆಸ್ ೮ ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ.
ಇಂಡಿಯಾ ಟುಡೇ ಮತದಾನೋತ್ತರ ಸಮೀಕ್ಷೆಯಂತೆ ಬಿಜೆಪಿ 20 ರಿಂದ 22 ಸ್ಥಾನವನ್ನು, ಜೆಡಿಎಸ್ 2 ರಿಂದ 3 ಸ್ಥಾನವನ್ನು ಹಾಗೂ ಕಾಂಗ್ರೆಸ್ 3 ರಿಂದ 5 ಸ್ಥಾನವನ್ನು ಗಳಿಸಲಿದೆ ಎಂದು ಘೋಷಿಸಿದೆ.
ಪೋಲ್ ಹಬ್ ಮತದಾನೋತ್ತರ ಸಮೀಕ್ಷೆಯ ಅನುಸಾರ ಬಿಜೆಪಿಗೆ 21 ರಿಂದ 24 ಸ್ಥಾನ, ಜೆಡಿಎಸ್ಗೆ 1 ರಿಂದ 2, ಕಾಂಗ್ರೆಸ್ಗೆ 3 ರಿಂದ 7 ಸ್ಥಾನ ದೊರೆಯಲಿದೆ ಎಂದು ಹೇಳಲಾಗಿದೆ.