ನವದೆಹಲಿ, ಜೂ. 03(DaijiworldNews/AK): ಶಾಲಾ-ಕಾಲೇಜುಗಳಲ್ಲಿ ಜಸ್ಟ್ ಪಾಸ್ ಆಗುತ್ತಿದ್ದ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ, ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅದೇ ರೀತಿ ಯುಪಿಎಸ್ ಸಿ ಪರೀಕ್ಷೆ ಯಲ್ಲಿ ಸಾಧನೆ ಮಾಡಿದ ನಿತಿನ್ ಸಾಂಗ್ವಾನ್ ಕೂಡ ಒಬ್ಬರು. ಅವರ ಅಪರೂಪದ ಸಾಧನೆಯ ಬಗ್ಗೆ ತಿಳಿಯೋಣ ಬನ್ನಿ.
ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳು ತುಂಬಾನೇ ಮುಖ್ಯ. ಒಳ್ಳೆಯ ಅಂಕಗಳನ್ನು ಗಳಿಸಿದವರು ಮುಂದೆ ಜೀವನದಲ್ಲಿ ಚೆನ್ನಾಗಿರುತ್ತಾರೆ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ವೃತ್ತಿಜೀವನದಲ್ಲಿ ಯಶಸ್ಸು 10 ಅಥವಾ 12 ನೇ ತರಗತಿಯಲ್ಲಿ ಗಳಿಸಿದ ಉತ್ತಮ ಅಂಕಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಐಎಎಸ್ ನಿತಿನ್. ಐಎಎಸ್ ನಿತಿನ್ ಅವರು ಸಿಬಿಎಸ್ಇ ಬೋರ್ಡ್ 12ನೇ ತರಗತಿಯಲ್ಲಿ ರಸಾಯನಶಾಸ್ತ್ರದಲ್ಲಿ ಕೇವಲ 24 ಅಂಕ ಪಡೆದಿದ್ದರು. ಇದು ಉತ್ತೀರ್ಣ ಅಂಕಗಳಿಗಿಂತ ಕೇವಲ ಒಂದು ಸಂಖ್ಯೆ ಹೆಚ್ಚು ಅಷ್ಟೇ. ಆದರೆ ನಿತಿನ್ ಸಾಂಗ್ವಾನ್ ಯುಪಿಎಸ್ ಸಿ ಟಾಪರ್ ಆಗಿದ್ದಾರೆ. 2016 ರ ಬ್ಯಾಚ್ ಐಎಎಸ್ ನಿತಿನ್ ಸಾಂಗ್ವಾನ್ ಯುಪಿಎಸ್ ಸಿಯಲ್ಲಿ ಅಖಿಲ ಭಾರತ 28 ನೇ ರ್ಯಾಂಕ್ ಹೊಂದಿದ್ದರು. ಅವರು ಗುಜರಾತ್ ಕೇಡರ್ನ ಐಎಎಸ್ ಅಧಿಕಾರಿಯಾದರು.
ಹರಿಯಾಣದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ ಅವರು ಐಐಟಿ ಮದ್ರಾಸ್ನಲ್ಲಿ ತಮ್ಮ ಎಂಟೆಕ್ ಮಾಡಿದರು. ಇದಾದ ಬಳಿಕ ಯುಪಿಎಸ್ ಸಿ ಪರೀಕ್ಷೆಯನ್ನು ತೆಗೆದುಕೊಂಡು ಐಎಎಸ್ ಅಧಿಕಾರಿಯಾದರು.