ನವದೆಹಲಿ,ಮೇ09((DaijiworldNews/AZM): 'ಮಕ್ಕಳ ನರ್ಸರಿ ಕವಿತೆಯ ಮೂಲಕ ಪ್ರಧಾನಿ ಮೋದಿಯವರನ್ನು ಆರ್ ಜೆಡಿ ವ್ಯಂಗ್ಯವಾಡಿದೆ.
ಲಾಲೂ ಪ್ರಸಾದ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ಜಾನಿ ಜಾನಿ ಎಸ್ ಪಪ್ಪಾ' ಎಂಬ ಮಕ್ಕಳ ನರ್ಸರಿ ಕವಿತೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಭಿನ್ನವಾಗಿ ಟೀಕಿಸಿದೆ.
'ಭವಿಷ್ಯದಲ್ಲಿ ಮೋದಿ ಭಕ್ತರ ಮಕ್ಕಳು ಈ ಹಾಡನ್ನು ಕಲಿಯಲಿದ್ದಾರೆ. 'ಮೋದಿ- ಮೋದಿ ಎಸ್ ಪಪ್ಪಾ, ಎನಿ ಡೆವಲೆಪ್ಮೆಂಟ್? ನೋ ಪಪ್ಪಾ? ಫಾರ್ಮರ್ ಹ್ಯಾಪಿ? ನೋ ಪಪ್ಪಾ, ವುಮನ್ ಸೇಫ್? ನೋ ಪಪ್ಪಾ, 10 ಕ್ರೋರ್ ಜಾಬ್ ನೋ ಪಪ್ಪಾ, 15 ಲಕ್ಷ?? ನೋ ಪಪ್ಪಾ, ಓನ್ಲಿ ಜುಮ್ಲಾ? ಹ್ಹ ಹ್ಹ ಹ್ಹ' (ಮೋದಿ- ಮೋದಿ ಹೌದು ಅಪ್ಪಾ, ಯಾವುದೇ ಅಭಿವೃದ್ಧಿ? ಇಲ್ಲಾ ಅಪ್ಪಾ, ರೈತರು ಖುಷಿಯೇ? ಇಲ್ಲಾ ಅಪ್ಪಾ, ಮಹಿಳೆಯರು ಸುರಕ್ಷಿತವೇ? ಇಲ್ಲಾ ಅಪ್ಪಾ, 10 ಕೋಟಿ ಉದ್ಯೋಗ? ಇಲ್ಲಾ ಅಪ್ಪಾ, 15 ಲಕ್ಷ?? ಇಲ್ಲಾ ಅಪ್ಪಾ, ಬರೀ ಸುಳ್ಳು? ಹ್ಹ ಹ್ಹ ಹ್ಹ) ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣ ಪ್ರಧಾನಿ ಮೋದಿ, ಅವರ ಒಡೆದು ಆಳುವ ನೀತಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದರು.