ಬೆಂಗಳೂರು,ಮೇ09((DaijiworldNews/AZM):ರಿಕ್ಷಾ ಚಾಲಕನೋರ್ವನಿಗೆ ಅಮೆರಿಕಾ ಮಹಿಳೆ 1.60 ಕೋಟಿ ರೂಪಾಯಿ ದಾನವಾಗಿ ಕೊಟ್ಟಿದ್ದಾರೆ ಅಂತೆ. ಹೌದು ಈ ಕುರಿತ ಪೂರಕ ದಾಖಲೆಗಳನ್ನು ಮಹಿಳೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ಮುಂದೆ ಇಟ್ಟಿದ್ದಾರೆ.
ಆಟೋ ಚಾಲಕ ಸುಬ್ರಮಣಿ ಎಂಬವರು ವೈಟ್ಫೀಲ್ಡ್ ಪ್ರದೇಶದಲ್ಲಿ 1.60 ಕೋಟಿ ರೂ. ಮೌಲ್ಯದ ವಿಲ್ಲಾ ಖರೀದಿಸಿದ್ದರು. ಆಟೋ ಚಾಲಕರೊಬ್ಬರು 1.60 ಕೋಟಿಯ ವಿಲ್ಲಾ ತೆಗೆಯಲು ಹೇಗೆ ಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿದ ಐಟಿ ಅಧಿಕಾರಿಗಳ ಮುಂದೆ ಅಮೆರಿಕಾ ಮಹಿಳೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆಟೊ ಚಾಲಕ ಸುಬ್ರಮಣಿ ಎಂಬುವರಿಗೆ ಆ ಹಣವನ್ನು ದಾನವಾಗಿ ಕೊಟ್ಟಿದ್ದೇನೆ ಎಂದು ಅಮೆರಿಕಾದ ಮಹಿಳೆ ಲಾರಾ ಇವಿಷನ್ (72) ಆದಾಯ ತೆರಿಗೆ ಇಲಾಖೆ ಎದುರು ಹೇಳಿಕೆ ನೀಡಿದ್ದಾರೆ.
2006ರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸುಬ್ರಮಣಿ ಆಟೋ ಹತ್ತಿದ್ದೆ. ಆತನ ಪರಿಚಯವಾಯಿತು. ಕುಟುಂಬದ ಬಗ್ಗೆ ಮಾಹಿತಿ ಪಡೆದಿದ್ದೆ. ಜತ್ತಿ ದ್ವಾರಕಮಯಿ ಲೇಔಟ್ನಲ್ಲಿ ವಿಲ್ಲಾ ಖರೀದಿಗೆ ಹಣ ಕೊಟ್ಟಿದ್ದೆ ಎಂದು ಪೂರಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ವೇಳೆ ಎರಡಕ್ಕೂ ಹೋಲಿಕೆ ಕಂಡು ಬಂದಿದೆ.