ನವದೆಹಲಿ,ಮೇ11((DaijiworldNews/AZM): ತಮಗೆ ಹಿಂದಿ ಭಾಶೆ ಸರಿಯಾಗಿ ಬಾರದ ಹಿನ್ನಲೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸೃಷ್ಟಿಸಲಾಗಿದೆ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡ ಕ್ಷಮೆ ಕೇಳಿದ್ದಾರೆ.
1984ರ ಸಿಖ್ ವಿರೋಧಿ ದಂಗೆ ಘಟನೆ ಬಗ್ಗೆ ಮಾತನಾಡುತ್ತಾ ಸ್ಯಾಮ್ ಪಿತ್ರೋಡಾ ಅವರು, “ಹುವಾ ತೋ ಹುವಾ(ಆಗಿದ್ದು ಆಗಿ ಹೋಗಿದೆ)” ಎಂದು ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಪಕ್ಷದಿಂದಲೇ ಸಿಖ್ ಹತ್ಯಾಕಾಂಡ ನಡೆಯಿತೆಂಬ ಆರೋಪಗಳು ಬಲವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ಸ್ಯಾಮ್ ಪಿತ್ರೋಡಾ ಅವರ ಇಷ್ಟು ಹಗುರವಾಗಿ ಹೇಳಿಕೆ ನೀಡಿದ್ದು ಬಿಜೆಪಿಗೆ ಹೊಸ ಚುನಾವಣೆ ಅಸ್ತ್ರ ಸಿಕ್ಕಂತಾಗಿತ್ತು.
ಈ ಹಿನ್ನಲೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಪಿತ್ರೋಡಾ ನಂಗೆ ಹಿಂದಿ ಜ್ಞಾನ ಕಡಿಮೆ. ಇಂಗ್ಲೀಷ್ನಲ್ಲಿ ಹೇಳುವುದನ್ನು ಭಾಷಾಂತರಿಸಿ ಹಿಂದಿಯಲ್ಲಿ ಹೇಳಲು ಪ್ರಯತ್ನಿಸಿದೆ. ಆದರೆ ಅದು ಇಷೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ನಾನು ವಿಷಾದಿಸುತ್ತೇನೆ. 1984ರಲ್ಲಿ ಏನು ನಡೆದಿದ್ಯೋ ಅದು ನಿಜವಾಗ್ಲೂ ಕೆಟ್ಟ ಘಟನೆಯಾಗಿತ್ತು ಅಂತಾ ಹೇಳೋದಷ್ಟೇ ನನ್ನ ಉದ್ದೇಶವಾಗಿತ್ತು" ಎಂದು ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆ ಕೋರಿದರು.
ಇನ್ನು ಈ ಕುರಿತು ಕಾಂಗ್ರೆಸ್ ಪ್ರತಿಕ್ರಯಿಸಿದ್ದು, ಸ್ಯಾಮ್ ಪಿತ್ರೋಡ ನೀಡಿರುವ ಹೇಳಿಕೆ ಅವರ ವೈಯಕ್ತಿಕವಾದುದೇ ಹೊರತು ಪಕ್ಷದ ಹೇಳಿಕೆಯಲ್ಲ.ಪಕ್ಷದ ಮುಖಂಡರು ಹೇಳಿಕೆಗಳನ್ನು ನೀಡುವಾಗ ನಿಗಾ ವಹಿಸುವಂತೆ ತಿಳಿಸಿದೆ.