ಕಲಬುರಗಿ,ಮೇ11(DaijiworldNews/AZM):ಮೈತ್ರಿ ಸರ್ಕಾರವನ್ನು ಬೀಳಿಸೋಕೆ ಮಿಸ್ಟರ್ ಯಡಿಯೂರಪ್ಪ ಅವರಿಂದ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುಡ್ಡು ಕೊಟ್ಟು ನಮ್ಮ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಯಡಿಯೂರಪ್ಪರಿ ಮೈತ್ರಿ ಸರಕಾರವನ್ನು ಬೀಳಿಸೋಕೆ ಆಗಲ್ಲ ಎಂದರು.
ಇನ್ನು 20 ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅಶೋಕ್ ಗೆ ಸತ್ಯಾನು ಗೊತ್ತಿಲ್ಲ, ಸುಳ್ಳೂ ಗೊತ್ತಿಲ್ಲ. ಅವನೇನು ಮಾತಡ್ತಾನೆ, ಅವನಿಗೆ ಅರ್ಥ ಆಗಲ್ಲ. ಅವನ ಮಾತಿಗೆ ತಳ ಇರಲ್ಲ. ಬುಡ ಇರಲ್ಲ. ಮೋದಿ ಮತ್ತೆ ಪ್ರಧಾನಿ ಆಗಲ್ಲ, ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ ಎಂದು ಹೇಳಿದರು.
ಬರ ನಿರ್ವಹಣೆಯ ಕುರಿತು ಮಾತನಾಡಿದ ಸಿದ್ಧು, ಬರ ನಿರ್ವಹಣೆಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬರ ನಿರ್ವಹಣೆಗಾಗಿ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಗೊಳಿಸಿದೆ. ಸದ್ಯ ಕುಡಿಯುವ ನೀರು, ಮೇವು ಸರಬಾರಜಿಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದರು.