ಹುಬ್ಬಳ್ಳಿ, ಮೇ.11(Daijiworld News/SS): ಯಾವಾಗಲೂ ನನ್ನ ಜಪ ಮಾಡುವ ಬಿಜೆಪಿಯವರಿಗೆ ನನ್ನನ್ನು ಕಂಡರೆ ಪ್ರೀತಿ ಹೆಚ್ಚು ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. ಓಂ ನಮಃ ಶಿವಾಯ ಎಂಬ ಜಪದ ಹಾಗೇ ನನ್ನ ಜಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಹಣದ ಚೀಲ ತಂದು ಸುರಿಯುತ್ತಿದ್ದಾರೆ ಎಂಬ ಸಂಸದೆ ಶೋಭಾ ಕರಂದಾಜ್ಲೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶೋಭಾಕ್ಕನನ್ನು ಬನ್ನಿ ಅಂತ ಹೇಳಿ. ಆ ಹಣದ ಚೀಲವನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ವ್ಯಂಗ್ಯವಾಗಿ ನುಡಿದರು.
ಇದೇ ವೇಳೆ ಈಶ್ವರಪ್ಪ ವಿಚಾರವಾಗಿ ಮಾತನಾಡಿದ ಡಿಕೆಶಿ, ಈಶ್ವರಪ್ಪನವರು ಅವರ ಮನಸ್ಸಿಗೆ ಬಂದ ಹಾಗೆ ಮಾತನಾಡಲಿ ಬಿಡಿ. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ. ವೀರಾವೇಷದಲ್ಲಿ ಮಹಿಶಾಷುರನ ಖುಷಿಗಾಗಿ ಏನಾದ್ರೂ ಹೇಳಲಿ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ 22 ಜನ ಮಾತ್ರ ಅಲ್ಲ, 222 ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.