ಶ್ರೀನಗರ,ಮೇ12(DaijiworldNews/AZM):ಇದೇ ಮೊದಲ ಬಾರಿಗೆ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ತನ್ನ ನೆಲೆ ಸ್ಥಾಪಿಸಿಕೊಂಡಿದೆ ಎಂದು ಘೋಷಿಸಿದೆ.
ಐಸಿಸ್ನ ಮುಖವಾಣಿ ಸಂಸ್ಥೆ ಅಮಾಕ್ ನ್ಯೂಸ್ ಏಜೆನ್ಸಿ ಇದೀಗ ಭಾರತದಲ್ಲಿ ನೂತನ ಪ್ರಾಂತ್ಯವೊಂದನ್ನು ಸ್ಥಾಪಿಸಿರುವುದಾಗಿ ತಿಳಿಸಿದೆ. ಅಲ್ಲದೆ ತನ್ನ ಹೊಸ ಪ್ರಾಂತ್ಯಕ್ಕೆ ವಿಲಾಯ್ಹ್ ಆಫ್ ಹಿಂದ್ ಎಂದು ಕರೆದುಕೊಂಡಿದ್ದು, ಕಾಶ್ಮೀರದ ಶೋಪಿಯಾನ್ ಹಾಗೂ ಅಮ್ಶಿಪೋರಾ ದಲ್ಲಿ ಸೇನೆಯ ಮೇಲೆ ದಾಳಿ ನಡೆಸಿದ್ದೇವೆ. ಹಾಗೂ ಭಾರತೀಯ ಸೇನೆಯ ಕೆಲವರನ್ನು ಕೊಂದಿರುವುದಾಗಿ ಹೊಣೆ ಹೊತ್ತುಕೊಂಡಿದೆ.ಅಲ್ಲದೆ ತನ್ನ ಹೊಸ ಪ್ರಾಂತ್ಯಕ್ಕೆ ವಿಲಾಯ್ಹ್ ಆಫ್ ಹಿಂದ್ ಎಂದು ಕರೆದುಕೊಂಡಿದ್ದು, ಕಾಶ್ಮೀರದ ಶೋಪಿಯಾನ್ ಹಾಗೂ ಅಮ್ಶಿಪೋರಾ ದಲ್ಲಿ ಸೇನೆಯ ಮೇಲೆ ದಾಳಿ ನಡೆಸಿದ್ದೇವೆ ಎಂದಿದೆ. ಮೇಲಾಗಿ ಭಾರತೀಯ ಸೇನೆಯ ಕೆಲವರನ್ನು ಕೊಂದಿರುವುದಾಗಿ ಹೊಣೆ ಹೊತ್ತುಕೊಂಡಿದೆ. ಐಸಿಸ್ ಹೀಗೆ ನೆಲೆ ಸ್ಥಾಪಿಸಿ ಅಲ್ಲಿ ತನ್ನ ಚಟುವಟಿಕೆಗಳನ್ನು ವ್ಯಾಪಿಸುತ್ತದೆ.
ಕಳೆದ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಈತ ಐಸಿಸ್ ಉಗ್ರರರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.ಹಾಗೂ ಸ್ಥಳದಲ್ಲಿ ಸಿಕ್ಕ ದಾಖಲೆಗಳು ಹಾಗೂ ಫೋಟೋಗಳಿಂದ ಮೃತ ಉಗ್ರನನ್ನು ಅಬು ನದಾರ್ ಎಂದು ಗುರುತಿಸಲಾಗಿದ್ದು, ಕಾಶ್ಮೀರದವನೇ ಆಗಿದ್ದ ಈತನ ಫೋಟೋವನ್ನೇ ಐಸಿಸ್ ಸಂಘಟನೆ ಬಿಡುಗಡೆ ಮಾಡಿದೆ.