ಮಹಾರಾಷ್ಟ್ರ, ಜೂ. 05(DaijiworldNews/AK): ಐಎಎಸ್ ಸೋಮನಾಥ್. ಇವರು ಮೂಲತಃ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗುವಾಂಚ್ ಗ್ರಾಮದವರು. ರೈತ ಕುಟುಂಬದಲ್ಲಿ ಬೆಳೆದ ಸೋಮನಾಥ್ ಮನೆಯಲ್ಲಿ ಬಡತನವನ್ನು ಕಂಡವರು.ಆದರೂ ಅದನ್ನೆಲ್ಲ ಮೆಟ್ಟಿ ನಿಂತು ಐಎಎಸ್ ಆಧಿಕಾರಿಯಾದ ಸೋಮನಾಥ್ ಅವರ ಸಾಧನೆಯ ಕಥೆ.
ನಾಸಿಕ್ ನ ಬಡ ರೈತ ಕುಟುಂಬದ ಸೋಮನಾಥ್ ಅವರಿಗೆ ಮೂವರು ಸಹೋದರಿಯರಿದ್ದಾರೆ. ಸೋಮನಾಥ್ ಅವರ ತಂದೆ-ತಾಯಿ ಇಂದಿಗೂ ಕೃಷಿ ಕೆಲಸ ಮಾಡುತ್ತಾರೆ.
ಸೋಮನಾಥ್ ಶಾಲಾ ಶಿಕ್ಷಣದ ನಂತರ ಎಂಜಿನಿಯರಿಂಗ್ ಓದಿದರು. ಇಂಜಿನಿಯರಿಂಗ್ ನಂತರ ಸೆಲ್ ಆಫೀಸರ್ ಆದರು. ಇದಾದ ಬಳಿಕ ಹಣಕಾಸಿನ ತೊಂದರೆಯಿಂದ ಯುಪಿಎಸ್ ಸಿಗೆ ತಯಾರಿ ನಡೆಸಲು ಸಾಧ್ಯವಾಗಲಿಲ್ಲ.
ಸೋಮನಾಥ್ ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಗೆ ತಯಾರಾಗಲು ಬಯಸಿದ್ದರು. GRE ಅಂದರೆ US, ಕೆನಡಾ ಮತ್ತು ಇತರ ಹಲವು ದೇಶಗಳಲ್ಲಿ ಪದವಿ ಪ್ರವೇಶಕ್ಕೆ ಅಗತ್ಯವಿರುವ ಪ್ರಮಾಣೀಕೃತ ಪರೀಕ್ಷೆಯಾಗಿದೆ. ಹಣದ ಕೊರತೆಯಿಂದ ಸೋಮನಾಥ್ ಜಿಆರ್ ಇಗೂ ತಯಾರಿ ನಡೆಸಲು ಸಾಧ್ಯವಾಗಲಿಲ್ಲ. MPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಮುಂಬೈನ ಮಂತ್ರಾಲಯದಲ್ಲಿ ಸೆಲ್ ಅಧಿಕಾರಿಯಾದರು. ನಂತರ ಸೋಮನಾಥ್ ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಸೋಮನಾಥ್ ಅವರು 2016, 2017 ಮತ್ತು 2018 ರಲ್ಲಿ ಮೂರು ಬಾರಿ UPSC CSE ಅನ್ನು ತೆರ್ಗೆಡೆಗೆ ಸಾಧ್ಯವಾಗಲಿಲ್ಲ.
2019ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಕಡಿಮೆ ರ್ಯಾಂಕ್ ಬಂದ ಕಾರಣ ಬಯಸಿದ ಪೋಸ್ಟಿಂಗ್ ಸಿಗಲಿಲ್ಲ. 2019ರಲ್ಲಿ IRS ಪೋಸ್ಟ್ ಸಿಕ್ಕಿತು. 2020ರಲ್ಲಿ 5ನೇ ಬಾರಿಗೆ UPSC ಪರೀಕ್ಷೆಯನ್ನು ನೀಡಿದರು, ಅವರಿಗೆ ಅಖಿಲ ಭಾರತ 166 ರ್ಯಾಂಕ್ ಸಿಕ್ಕಿತು.
ಈ ರ್ಯಾಂಕ್ ನೊಂದಿಗೆ ಸೋಮನಾಥ್ ಅವರ ಕನಸು ನನಸಾಯಿತು, ಅವರು IAS ಹುದ್ದೆಯನ್ನು ಪಡೆದರು. ಮೊದಲ ಪೋಸ್ಟಿಂಗ್ ರಾಜಸ್ಥಾನದ ಬಾರ್ಮರ್ ನಲ್ಲಿ ಆಯಿತು. ಇಲ್ಲಿ ಅವರು ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.