ನವದೆಹಲಿ, ಜೂ 06 (DaijiworldNews/MS): ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯು ಮೊದಲ ಎರಡಕ್ಕಿಂತ ಭಿನ್ನವಾಗಿರಬಹುದು ಎಂಬ ಮೊದಲ ಸಂಕೇತವಾಗಿ, ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಪರಿಶೀಲಿಸಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಜನತಾ ದಳ ಯುನೈಟೆಡ್ ನಾಯಕರೊಬ್ಬರು ಹೇಳಿದ್ದಾರೆ.
ಅಗ್ನಿವೀರ್ ಯೋಜನೆ ಬಗ್ಗೆ ಒಂದು ವರ್ಗದ ಮತದಾರರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಾರ್ವಜನಿಕರಿಂದ ಪ್ರಶ್ನಿಸಲ್ಪಟ್ಟಿರುವ ಯೋಜನೆಗಳ ಕುರಿತು ವಿವರವಾಗಿ ಚರ್ಚಿಸಿ ತೆಗೆದುಹಾಕಬೇಕು ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಅವರು ಗುರುವಾರ ಹೇಳಿದ್ದಾರೆ.
ಹಲವಾರು ರಾಜ್ಯಗಳಲ್ಲಿ ಈ ಯೋಜನೆಯ ವಿರುದ್ಧ ಅಸಮಾಧಾನವಿದೆ , ಆದ್ದರಿಂದ ನಾವು ಅಗ್ನಿವೀರ್ ವಿಮರ್ಶೆಯನ್ನು ಕೋರುತ್ತೇವೆ, ನಾವು ಅದನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ನಡೆದ ಎನ್ ಡಿಎ ನಾಯಕರ ಸಭೆಯಲ್ಲಿ ಜೆಡಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾಗವಹಿಸಿ, ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡುವುದಾಗಿ ಪತ್ರ ನೀಡಿದ್ದಾರೆ.