ಉತ್ತರ ಪ್ರದೇಶ, ಜೂ. 07(DaijiworldNews/AA): ಕೊರೊನಾ ಮಹಾಮಾರಿಯ ಸಂದಿಗ್ಧವಾದ ಸಮಯದಲ್ಲಿ ಆಸ್ಪತ್ರೆಯಲ್ಲಿ ತನ್ನ ತಂದೆ-ತಾಯಿಯ ಆರೈಕೆ ಮಾಡುತ್ತಲೇ ಪರೀಕ್ಷೆಗೆ ತಯಾರಿಸಿ ನಡೆಸಿದ ಕೃತಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಯಶಸ್ಸಿನ ಕಥೆ ಇಲ್ಲಿದೆ.
ಉತ್ತರ ಪ್ರದೇಶದ ಐತಿಹಾಸಿಕ ನಗರಿ ಝಾನ್ಸಿಯ ನಿವಾಸಿ ಕೃತಿ ರಾಜ್ ಯುಪಿ ಕೇಡರ್ ನ ಐಎಎಸ್ ಅಧಿಕಾರಿ. ಅವರು ಝಾನ್ಸಿಯ ಸೇಂಟ್ ಫ್ರಾನ್ಸಿಸ್ ಕಾನ್ವೆಂಟ್ ಶಾಲೆಯಲ್ಲಿ ಮತ್ತು ಜೈ ಅಕಾಡೆಮಿಯಿಂದ 12 ನೇ ತರಗತಿಯವರೆಗೆ ಓದಿದ್ದಾರೆ. ಇದರ ನಂತರ ಅವರು ಬಿಐಟಿ ಝಾನ್ಸಿಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವಿ ಪಡೆದರು.
ಬಿ.ಟೆಕ್ ನಂತರ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಬದಲಾಗಿ ಸಮಾಜಮುಖಿ ಕೆಲಸ ಮಾಡಬೇಕೆಂದು ಬಯಸಿದ್ದರು. ಇದಕ್ಕಾಗಿ ಅವರು ಕಲ್ಪವೃಕ್ಷ ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದರ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಕೆಲಸ ಪ್ರಾರಂಭವಾಯಿತು. ಇದೇ ವೇಳೆ ಸಿವಿಲ್ ಸರ್ವಿಸಸ್ ಗೆ ಸೇರಲು ಮನಸ್ಸು ಮಾಡಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಕೃತಿ ರಾಜ್ ಅವರು 2020 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಿದರು. ಈ ಸಮಯದಲ್ಲಿ, ಕೊರೊನಾ ಎಲ್ಲರ ನಿದ್ದೆ ಕೆಡಿಸಿತ್ತು . ಅದೇ ಸಮಯದಲ್ಲಿ ಕೃತಿ . ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಅವರ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರು.ಇಂತಹ ಪರಿಸ್ಥಿತಿಯಲ್ಲಿ ಕೃತಿ ರಾಜ್ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಲೇ ತನ್ನ ತಯಾರಿಯನ್ನು ಮುಂದುವರೆಸಿದರು.
ಕೃತಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 106 ನೇ ರ್ಯಾಂಕ್ ಗಳಿಸುವ ಮೂಲಕ IAS ಸ್ಥಾನವನ್ನು ಪಡೆದರು. ಐಎಎಸ್ ಕೃತಿ ರಾಜ್ ಅವರು 2017 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಆರಂಭಿಕ 8 ರಿಂದ 10 ತಿಂಗಳುಗಳವರೆಗೆ, ಅವರು ಪ್ರತಿದಿನ ಸುಮಾರು 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಇದಾದ ಬಳಿಕ ತಮ್ಮ ತಂತ್ರವನ್ನು ಬದಲಿಸಿ ಪ್ರಚಲಿತ ವಿದ್ಯಮಾನಗಳತ್ತ ಗಮನ ಹರಿಸಿದರು. ಈ ತಂತ್ರದಿಂದ ಆಕೆ ಐಎಎಸ್ ಆಗುವಲ್ಲಿ ಯಶಸ್ಸಿಯಾಗಿದ್ದಾರೆ.