ಒಡಿಶಾ, ಜೂ. 10(DaijiworldNews/AK):ಎಎಸ್ ಕಸ್ತೂರಿ ಪಾಂಡಾ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಅಖಿಲ ಭಾರತ 67 ನೇ ಸ್ಥಾನವನ್ನು ಗಳಿಸಿದ್ದಾರೆ.
ಒಡಿಶಾ ಮೂಲದ ಕಸ್ತೂರಿ ಪಾಂಡಾ ಅವರು ಎನ್ಐಟಿಯಿಂದ ಬಿಟೆಕ್ ಓದಿದ್ದಾರೆ. ಅವರು 2022 ರಲ್ಲಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 67 ನೇ ಸ್ಥಾನವನ್ನು ಗಳಿಸಿದ್ದಾರೆ. ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ಒಟ್ಟು 1006 ಅಂಕಗಳನ್ನು - 822 ಅಂಕವನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದಿದ್ದರು.
ಯಾವುದೇ ಕೋಚಿಂಗ್ ಇಲ್ಲದೆಯೇ ಎರಡನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿ ಹುದ್ದೆಗೆ ತಲುಪಿದ್ದಾರೆ.
ಕಸ್ತೂರಿಯವರು NIT ರೂರ್ಕೆಲಾದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ B.Tech ಪದವಿಯನ್ನು ಪಡೆದರು. ನಂತರ ಅವರಿಗೆ UPSC ಪರೀಕ್ಷೆ ಬರೆಯಬೇಕು ಎಂದು ಅನಿಸಿತು. ನಂತರ ಅವರು ತಮ್ಮ ಪಾಡಿಗೆ ತಾವೇ ಓದಲು ಆರಂಭಿಸಿದರು. .
ತಮ್ಮ ಪ್ರಯತ್ನದ ಮೂಲಕವೇ ಅವರು ಪರೀಕ್ಷೆ ಪಾಸ್ ಮಾಡಿ ಸಾಧನೆ ಮಾಡಿದ್ದಾರೆ. . ಕಸ್ತೂರಿ ಪಾಂಡವರು ಮನೆಯಲ್ಲೇ ಇದ್ದುಕೊಂಡು ಹಲವು ಪರೀಕ್ಷಾ ಪತ್ರಿಕೆಗಳನ್ನು ಓದುತ್ತಿದ್ದರು. ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕೆಲವು ಗುರಿಯನ್ನು ತಮಗೆ ತಾವೇ ನಿಗದಿಪಡಿಸಿಕೊಳ್ಳ ಬೇಕಾಗುತ್ತದೆ