ಕಲಬುರಗಿ,ಮೇ13(DaijiworldNews/AZM): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಯಾಗಿ ತಮ್ಮ ಸಾಧನೆಯೇನೆಂದು ಪ್ರಶ್ನಿಸಿರುವ ವಿಶ್ವನಾಥ್ ಹೊಟ್ಟೆಕಿಚ್ಚಿ ನಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಿದ್ದು ಪ್ರತಿಕ್ರಯಿಸಿದ್ದಾರೆ. ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುತ್ತೇನೆ ಎಂದ ಅವರು ಇಂಥ ಹೇಳಿಕೆಗಳ ಕುರಿತು ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲೇ ಮಾತನಾಡುತ್ತೇನೆ ಎಂದರು.
ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾಕೆ 78 ಸ್ಥಾನಕ್ಕೆ ಕುಸಿಯಿತು ಎಂಬ ವಿಶ್ವನಾಥ್ ಹೇಳಿಕೆಗೂ ಕಿಡಿಕಾರಿದ ಸಿದ್ಧರಾಮಯ್ಯ,ಅವರ ಮಾತಿಗೆ ಯಾರೂ ಜಾಸ್ತಿ ಕಿಮ್ಮತ್ತು ಕೊಡ ಬೇಡಿ ಎಂದರು.