ಬೆಂಗಳೂರು,ಮೇ13(DaijiworldNews/AZM):ಬೆಂಗಳೂರಿನಲ್ಲಿ ಚರ್ಚ್ ಗಳಿಗೆ ಭದ್ರತೆ ಒದಗಿಸುವಂತೆ ಆರ್ಚ್ ಬಿಷಪ್ ಚರ್ಚ್ ಫಾದರ್ಗಳಿಗೆ ಪತ್ರ ಬರೆದಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯ ಬಳಿಕ ಆತಂಕಗೊಂಡು ಬೆಂಗಳೂರಿನಲ್ಲೂ ಚರ್ಚ್ ಗಳಿಗೆ ಭದ್ರತೆ ಒದಗಿಸಲು ಕಲ್ಪಿಸಲಾಗಿದೆ.
ಸಿಸಿಟಿವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿ ದಿನದ 24ಗಂಟೆಯೂ ಅದರ ಮೇಲೆ ನಿಗಾ ಇಡುವಂತೆ ಮಾಡಬೇಕು.ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕಟ್ಟೆಚ್ಚರವಹಿಸಬೇಕು ಹಾಗೂ ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ಲಾಕ್ ಮಾಡುವುದನ್ನು ಮರೆಯಬಾರದು. ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ಇರಬೇಕು, ಹಾಗೂ ಅಪರಿಚಿತರು ಬ್ಯಾಗ್, ಕವರ್ ಇತ್ಯಾದಿಗಳನ್ನು ತಂದರೆ ಆವರಣದಲ್ಲಿ ಎಸೆದು ಹೋಗುವುದಕ್ಕೆ ಅವಕಾಶ ನೀಡಬಾರದು.ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿ ತೆರಳಲು ಸಾಧ್ಯ ಆಗುವಂತೆ ತುರ್ತು ದ್ವಾರಗಳು ಇರಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.