ರಾಜ್ಕೋಟ್, ಜೂ. 14(DaijiworldNews/AA): ರಾಜ್ಕೋಟ್ ಗೇಮ್ ಜೋನ್ ಅಗ್ನಿ ಅವಘಡಕ್ಕೆ ಸಂಬಂಧಪಟ್ಟಂತೆ ಗೇಮ್ ಝನ್ನ ಸಹಪಾಲುದಾರನನ್ನು ಪೊಲೀಸರು ಬಂಧಿಸಿದ್ದು, ಇದೀಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಗುಜರಾತ್ ರಾಜ್ಕೋಟ್ನ ಗೇಮಿಂಗ್ ಜೋನ್ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ್ದರು. ಈವರೆಗೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಸಹಪಾಲುದಾರನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಟಿಆರ್ಪಿ ಗೇಮ್ ಝನ್ನ 6 ಮಂದಿ ಸಹ-ಪಾಲುದಾರರಲ್ಲಿ ಒಬ್ಬರಾದ ಅಶೋಕ್ ಸಿನ್ಸ್ ಜಡೇಜಾ ಅವರು ಗುರುವಾರ ಸಂಜೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 25ರಂದು ಗುಜರಾತ್ ನ ರಾಜ್ಕೋಟ್ ನಗರದಲ್ಲಿನ ಗೇಮ್ ರೋನ್ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಘಟನೆ ನಂತರ ಸಹಪಾಲುದಾರ ಜಡೇಜಾ ತಲೆಮರೆಸಿಕೊಂಡಿದ್ದರು. ಸದ್ಯ ಅವರು ಅಪರಾಧ ವಿಭಾಗದ ವಶದಲ್ಲಿದ್ದಾರೆ ಎಂದು ರಾಜ್ಕೋಟ್ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಐವರು ಸಹ ಪಾಲುದಾರರನ್ನು ಮತ್ತು ವ್ಯವಸ್ಥಾಪಕರನ್ನು ಪೊಲೀಸರು ಬಂಧಿಸಿದ್ದರು.