ಬೆಂಗಳೂರು, ಜೂ 20 (DaijiworldNews/ AK):ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಪವಿತ್ರಾ ಗೌಡ ಪರಪ್ಪಾನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇತ್ತ ತಾಯಿಯನ್ನು ನೋಡುತ್ತಿದ್ದಂತೆ ಮಗಳು ಕಣ್ಣೀರು ಹಾಕಿದ್ದಾಳೆ.
ಕೊಲೆ ಪ್ರಕರಣ ಸಂಬಂಧ ಇಂದು ಮಧ್ಯಾಹ್ನದ ಬಳಿಕ ಆರೋಪಿಗಳನ್ನು ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ಪವಿತ್ರಾ ಗೌಡ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇತ್ತ ಕೋರ್ಟ್ ಹೊರಗಡೆ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಕಾಯುತ್ತಾ ನಿಂತಿದ್ದರು. ಪವಿತ್ರಾ ಗೌಡ ಕೋರ್ಟ್ನಿಂದ ಹೊರ ಬಂದು ಪೊಲೀಸ್ ವ್ಯಾನ್ ಹತ್ತುತ್ತಿದ್ದಂತೆಯೇ ಇಬ್ಬರು ಕೂಡ ಪವಿತ್ರಾ ಗೌಡ ಅವರನ್ನು ಕಂಡು ಕಣ್ಣೀರು ಹಾಕಿದ್ದಾರೆ.ಬಳಿಕ ಪವಿತ್ರಾ ಗೌಡ ಬಳಿಕ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.