ಬೆಂಗಳೂರು, ಜೂ. 21 (DaijiworldNews/AA): ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ದರ್ಶನ್ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಶಾಸಕರೊಬ್ಬರ ಆಪ್ತ ಮೋಹನ್ರಾಜ್ ಎಂಬುವವರಿಂದ 40 ಲಕ್ಷ ರೂ. ಕೈಸಾಲ ಮಾಡಿದ್ದರು. ಇದೀಗ ಮೋಹನ್ರಾಜ್ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಮಾಡಿರುವ ಕಸರತ್ತುಗಳೆಲ್ಲವೂ ಒಂದೊಂದಾಗಿ ಬಯಲಾಗಿದೆ. ಮೊನ್ನೆಯಷ್ಟೇ ದರ್ಶನ್ ಮನೆಯಲ್ಲಿ 37 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಷ್ಟು ದೊಡ್ಡ ಮೊತ್ತದ ಕುರಿತು ತನಿಖೆ ನಡೆಸಿದ ಪೊಲೀಸರು, ಶಾಸಕರೊಬ್ಬರ ಆಪ್ತ ಮೋಹನ್ರಾಜ್ ಎನ್ನುವವರ ಬಳಿ ದರ್ಶನ್ 40 ಲಕ್ಷ ರೂ. ಕೈಸಾಲ ಮಾಡಿದ್ದರು ಎನ್ನುವ ವಿಷಯ ಬಯಲಾಗಿದೆ.
ಮೋಹನ್ರಾಜ್ ದರ್ಶನ್ ಗೆ ಕೈಸಾಲ ನೀಡಿರುವ ವಿಷಯ ಬಯಲಾದ ಬೆನ್ನಲ್ಲೇ ಪೊಲೀಸರು ವಿಚಾರಣೆಗೆ ಮುಂದಾಗುತ್ತಿದ್ದಂತೆ ಮೋಹನ್ರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇನ್ನು ದರ್ಶನ್ಗೆ 40 ಲಕ್ಷ ರೂ. ಹಣ ನೀಡುವಾಗ ಮೋಹನ್ರಾಜ್ಗೆ ಕೊಲೆ ವಿಷಯ ತಿಳಿದಿತ್ತಾ ಇಲ್ವಾ ಎನ್ನುವುದು ಇನ್ನಷ್ಟೇ ತಿಲಿದುಬರಬೇಕಿದೆ. ಒಂದುವೇಳೆ ಕೊಲೆ ಮಾಡುವ ವಿಷಯ ಗೊತ್ತಿದ್ದೂ ಹಣ ನೀಡಿದ್ದರೇ ಮೋಹನ್ರಾಜ್ಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.