ಚಿತ್ರದುರ್ಗ, ಜೂ 23 (DaijiworldNews/MS): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಹತ್ವದ ಸಾಧನೆ ಮಾಡಿದೆ. ಪುಷ್ಪಕ್ ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV LEX-03) ಪ್ರಯೋಗವನ್ನು ಇಸ್ರೊ ಭಾನುವಾರ ಯಶಸ್ವಿಯಾಗಿ ನಡೆಸಿದೆ. ಅಲ್ಲದೇ ಇದು 3ನೇ ಮತ್ತು ಕೊನೆಯ ಪ್ರಾಯೋಗಿಕ ಉಡಾವಣೆಯೂ ಆಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಇಸ್ರೋ ಸಂಸ್ಥೆಯ ಏರೋನಟಕಲ್ ಟೆಸ್ಟ್ ರೇಂಜ್ (ATR) ಆವರಣದ ರನ್ವೇನಲ್ಲಿ ಬೆಳಗ್ಗೆ 7:10 ಗಂಟೆ ವೇಳೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್ ಯಶಸ್ವಿಯಾಗಿರುವುದಾಗಿ ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.