ಬೆಂಗಳೂರು, ಜೂ.25(DaijiworldNews/AA): ಕೇವಲ ಇನ್ನೂ ಮೂರು ಡಿಸಿಎಂಗಳು ಮಾತ್ರ ಯಾಕೆ? 10-15 ಜನರನ್ನು ಉಪ ಮುಖ್ಯಮಂತ್ರಿಗಳನ್ನು ಮಾಡಲಿ, ಯಾರು ಬೇಡ ಅಂತಾರೆ? ಪ್ರತಿ ಸಮುದಾಯಕ್ಕೊಬ್ಬ ಡಿಸಿಎ ಮಾಡಿದರೆ ಚೆನ್ನಾಗಿರುತ್ತದೆ ಎಂದು ಶಾಸಕ ಹೆಚ್ಸಿ ಬಾಲಕೃಷ್ಣ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಬೇಕೆನ್ನುವವರು ನಿರ್ದಿಷ್ಟ ಸಮುದಾಯದವರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕಿದ್ದಾರೆ ಅಂತ ಹೇಗೆ ಹೇಳುತ್ತಾರೆ? ಒಂದು ಪಕ್ಷ ಅವರು ಅಂದುಕೊಳ್ಳುತ್ತಿರೋದೇ ನಿಜವಾದರೆ ಯಾವ ಸಮುದಾಯದವರು ವೋಟು ಮಾಡಿದ್ದಾರೋ ಅವರಿಗೆ ಡಿಸಿಎಂ ಪಟ್ಟ ಸಿಗಲಿ, ಯಾವ ಸಮುದಾಯದವರು ಕಾಂಗ್ರೆಸ್ ವೋಟು ನೀಡಿಲ್ಲವೋ ಅವರಿಗೆ ಯಾವ ಸ್ಥಾನವೂ ಬೇಡ ಎಂದು ಬಾಲಕೃಷ್ಣ ಹೇಳಿದರು.
ಅಸಲು ವಿಷಯವೇನೆಂದರೆ ಶಕ್ತಿ ಇರೋರಷ್ಟೆ ಶಕ್ತ ರಾಜಕಾರಣಿಗಳು, ಅವರೇ ರಾಜಕಾರಣ ಮಾಡುತ್ತಾರೆ. ಮಾತಾಡೋರೆಲ್ಲ ರಾಜಕಾರಣಿಗಳಲ್ಲ ಎಂದು ಅವರು ತಿಳಿಸಿದರು.