ಬೆಂಗಳೂರು, ಜೂ 26 (DaijiworldNews/MS): ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪವಿತ್ರಾಗೌಡಗೆ ಮೇಕಪ್ ಮಾಡಲು ಅವಕಾಶ ಕೊಟ್ಟಿದ್ದ ಮಹಿಳಾ ಪಿಎಸ್ ಐಗೆ ನೋಟಿಸ್ ಜಾರಿ ಮಾಡಲಾಗಿದೆ.
ಜೂನ್ 15 ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಪವಿತ್ರಾಗೌಡ ಅವರ ಮನೆ ಮಹಜರು ಮಾಡಿದ್ದರು.
ಈ ವೇಳೆ ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಮಹಿಳಾ ಪಿಎಸ್ ಐ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಮಹಿಳಾ ಪಿಎಸ್ ಗಿರೀಶ್ ಅವರು ಪವಿತ್ರಾಗೌಡಗೆ ಲಿಫ್ಟ್ ಸ್ಟಿಕ್ ಹಚ್ಚಲು ಅವಕಾಶ ಮಾಡಿಕೊಟ್ಟ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಿದ್ದಾರೆ.