ಬೆಂಗಳೂರು, ಜೂ 26 (DaijiworldNews/MS): ರಾಜ್ಯದ ಮಾನವ ಸಂಪನ್ಮೂಲಕ್ಕೆ ವಿಶ್ವದಲ್ಲಿ ಅತೀ ಹೆಚ್ಚು ಬೇಡಿಕೆ ಇದೆ ಎಂದು ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ಮಾನವ ಸಂಪನ್ಮೂಲದ ವಿಷಯದಲ್ಲಿ ಬೇರೆ ರಾಜ್ಯಗಳೊಂದಿಗೆ ರಾಜ್ಯ ಪೈಪೋಟಿ ನಡೆಸುತ್ತಿಲ್ಲ. ಬದಲಾಗಿ ವಿಶ್ವದ ಮುಂದುವರೆದ ದೇಶಗಾಳದ ಚೈನಾ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ದೇಶಗಳೊಂದಿಗೆ ಪೈಪೋಟಿ ನಡೆಸಲಾಗುವುದು ಎಂದು ತಿಳಿಸಿದರು. ಆರ್ಥಿಕ ಮತ್ತು ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದ ಬಂಡವಾಳ ಹೂಡಿಕೆಗಾಗಿ ಉದ್ಯಮಿಗಳನ್ನು ರಾಜ್ಯಕ್ಕೆ ಆಹ್ವಾನಿಸಿರುವುದಾಗಿಯೂ ಅವರು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ರಾಜ್ಯವನ್ನು ಉದ್ಯೋಗ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಮೊದಲ ಸ್ಥಾನಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿಯರಿಂದ ಬಂಡವಾಳ ಹೂಡಿಕೆಗಾಗಿ ಲಂಡನ್, ಅಮೆರಿಕ, ಫ್ರಾನ್ಸ್ ಒಳಗೊಂಡು ಇತರ ದೇಶಗಳಿಗೆ ಭೀಟಿ ನೀಡಿದಾಗ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಉತ್ಸಾಹ ತೋರಿಸಿದ್ದಾರೆ ಎಂದರು.