ಹಾಸನ, ಜೂ 26 (DaijiworldNews/ AK): ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಜೂ.22 ರಂದು ಮೊದಲ ಕೇಸ್ ದಾಖಲಾಗಿತ್ತು. ಇದಾದ ಮಾರನೇ ದಿನ ಜೂ.23ರಂದು ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಿತ್ತು.
ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಹೊಳೆನರಸೀಪುರ ಗ್ರಾ. ಠಾಣೆಯಲ್ಲಿ ನಿನ್ನೆ(ಜೂ.25) ಮತ್ತೊಂದು ಕೇಸ್ ದಾಖಲಾದ ಹಿನ್ನಲೆ ಎರಡನೇ ಪ್ರಕರಣವನ್ನು ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಲಾಗಿದೆ. ಅದರಂತೆ ಪ್ರಕರಣದ ಕಡತಗಳನ್ನು ಸಿಐಡಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ.
ಇನ್ನು ಮೊದಲ ಪ್ರಕರಣದಲ್ಲಿ ಅರಕಲಗೂಡು ಮೂಲದ ಯುವಕ ದೂರು ನೀಡಿದ್ದರೆ, 2ನೇ ಪ್ರಕರಣದಲ್ಲಿ ಹೊಳೆನರಸೀಪುರ ಮೂಲದ ಯುವಕ ದೂರು ನೀಡಿದ್ದ. ಇದೀಗ ಎರಡೂ ಪ್ರಕರಣಗಳ ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.‘