ನವದೆಹಲಿ, ಮೇ14(Daijiworld News/SS): ಮೊಬೈಲ್ ಗೇಮ್ ಪಬ್-ಜಿಯನ್ನು ಯೋಧರು ಆಡುವಂತಿಲ್ಲವೆಂದು ಸಿಆರ್ಪಿಎಫ್ ಆದೇಶ ಹೊರಡಿಸಿದೆ.
ಪಬ್-ಜಿ ಮಿಲಿಟರಿ ಆಪರೇಷನ್ ಮಾದರಿಯ ಗೇಮ್ ಆಗಿದ್ದು, ಇದನ್ನು ಆಡುವುದರಿಂದ ಸೈನಿಕರಿಗೆ ಕಲಿಸಲಾಗಿರುವ ಸಮರಕಲೆಗಳ ಮೇಲೆ ಈ ಗೇಮ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಸೈನಿಕರ ಸಮರಕಲೆ ನಶಿಸುತ್ತದೆ ಎಂಬ ಕಾರಣಕ್ಕೆ ಈ ಆದೇಶವನ್ನು ಹೊರಡಿಸಲಾಗಿದೆ
ಪಬ್-ಜಿ ಮಿಲಿಟರಿ ಆಪರೇಷನ್ ರೀತಿಯ ಗೇಮ್ ಆಗಿದ್ದು, ಆಟಗಾರನು ವೈರಿಗಳನ್ನು ಹೊಡೆದುರುಳಿಸಿ ಮುಂದಿನ ಹಂತಕ್ಕೆ ಹೋಗುತ್ತಾನೆ. ಇದೊಂದು ಕೊನೆ ಇಲ್ಲದ ಗೇಮ್ ಆಗಿದ್ದು, ಯುವಕರಿಗೆ ಗೀಳು ಹತ್ತಿಸಿದೆ. ಪಬ್ಜಿ ಆಡುತ್ತಿರುವುದರಿಂದ ಸೈನಿಕರು, ತಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ. ನಿದ್ದೆಗೆಟ್ಟು ರಾತ್ರಿ ಸಮಯ ಸಹ ಪಬ್ಜಿ ಆಡುತ್ತಿರುವ ಕಾರಣ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಸಿಆರ್ಪಿಎಫ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಬ್ಜಿ ಆಡುವುದರಿಂದ ಸೈನಿಕರ ಮಾನಸಿಕ ಸ್ಥಿಮತೆ ತಪ್ಪುವ ಸಾಧ್ಯತೆಯೂ ಇದೆ. ಸೈನಿಕರು ಹೆಚ್ಚು ಆಕ್ರಮಣಶೀಲರಾಗುತ್ತಾರೆ, ಸಂಯಮ ಕಳೆದುಕೊಳ್ಳುತ್ತಾರೆ. ಗೇಮ್ನ ಮಾದರಿಯಲ್ಲಿಯೇ ಯೋಚನೆ ಮಾಡಲು ಯತ್ನಿಸುತ್ತಾರೆ ಎಂಬ ಆತಂಕವೂ ಇರುವ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.