ಬೆಂಗಳೂರು: ಪಾನಿಪುರಿಗೆ ಬಳಸುವ ರಾಸಾಯನಿಕಗಳ ಬ್ಯಾನ್ ಮಾಡುವ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸುಳಿವು ನೀಡಿದ್ದಾರೆ.
ಪಾನಿಪುರಿ ಸ್ಯಾಂಪಲ್ ಟೆಸ್ಟ್ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು, ಅದರ ಬೆನ್ನಲ್ಲೇ ಪಾನಿಪುರಿಗೆ ಬಳಸುವ ರಾಸಾಯನಿಕಗಳ ಬ್ಯಾನ್ ಮಾಡುವ ಬಗ್ಗೆ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಪಾನಿಪುರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ ಸನ್ ಸೆಟ್ ಯೆಲ್ಲೊ, ರೋಡೋಮೈನ್ ಸೇರಿದಂತೆ ಐದು ರಾಸಾಯನಿಕ ಅಂಶಗಳು ಪತ್ತೆಯಾಗಿರುತ್ತದೆ. ಜೂನ್ ೩೦ರಂದು ಈ ಕುರಿತು ಅಧಿಕೃತವಾಗಿ ಅವರು ಆದೇಶ ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೋಬಿ, ಕಬಾಬ್, ಕಾಟನ್ ಕ್ಯಾಂಡಿ ಬಗ್ಗೆ ಆರೋಗ್ಯ ಇಲಾಖೆ ಈಗಾಗಲೇ ಕ್ರಮಕೈಗೊಂಡಿದೆ. ಇದೀಗ ಪಾನಿಪೂರಿಗೆ ಬಳಸುವ ಕೆಮಿಕಲ್ ಬ್ಯಾನ್ ಮಾಡಲಾಗುತ್ತದೆ. ತಯಾರಕರು ಈ ಕೆಮಿಕಲ್ಅನ್ನು ಬ್ಯಾನ್ ಮಾಡಿದ ಮೇಲೂ ಬಳಕೆ ಮಾಡಬಾರದು. ಈ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಜನರು ಕೂಡ ಎಚ್ಚರಿಕೆ ವಹಿಸಬೇಕು ಅವರು ಸಲಹೆ ನೀಡಿದ್ದಾರೆ.