ಪಂಜಾಬ್, ಜೂ.30(DaijiworldNews/AA): ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆನ್ನುವುದು ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗು ಐಎಎಸ್ ಅಧಿಕಾರಿಯಾದ ಚಂದ್ರಜ್ಯೋತಿ ಸಿಂಗ್ ಅವರ ಯಶೋಗಾಥೆ ಇದು.
ಚಂದ್ರಜ್ಯೋತಿ ಸಿಂಗ್ ಅವರ ತಂದೆ ನಿವೃತ್ತ ಕರ್ನಲ್ ದಲ್ಬಾರಾ ಸಿಂಗ್ ಮತ್ತು ತಾಯಿ ನಿವೃತ್ತ ಸೇನಾ ರೇಡಿಯಾಲಜಿಸ್ಟ್ ಲೆಫ್ಟಿನೆಂಟ್ ಕರ್ನಲ್ ಮೀನಾ ಸಿಂಗ್.
ಚಂದ್ರಜ್ಯೋತಿ ಸಿಂಗ್ ರವರು ತಮ್ಮ ಹತ್ತನೇ ತರಗತಿ ಶಿಕ್ಷಣವನ್ನು ಪಂಜಾಬ್ ಜಲಾಂಧರ್ ಎಪಿಜೆ ಶಾಲೆಯಲ್ಲಿ ಪೂರ್ಣಗೊಸುತ್ತಾರೆ. ಆ ಬಳಿಕ ಚಂಡೀಗಢದ ಭವನ್ ವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ನಂತರ ದೆಹಲಿ ವಿಶ್ವವಿದ್ಯಾಲಯ ಅಧೀನದ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಇತಿಹಾಸ ಹಾನರ್ಸ್ ಡಿಗ್ರಿ ಪಡೆದರು.
ಚಂದದ್ರಜ್ಯೋತಿ ಸಿಂಗ್ ಅವರು ಪದವಿ ಶಿಕ್ಷಣ ಮುಗಿದ ಬಳಿಕ ಅಂದರೆ 2018ರಿಂದಲೇ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸಿದರು. 2020 ರ ವೇಳೆಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 28ನೇ ರ್ಯಾಂಕ್ ಪಡೆದು ತಮ್ಮ ಮೊದಲ ಪ್ರಯತ್ನದಲ್ಲೇ ತರಬೇತಿಯನ್ನೂ ಪಡೆಯದೇ ಉತ್ತೀರ್ಣರಾಗುವಲ್ಲಿ ಸಫಲಾಗುತ್ತಾರೆ. ಈ ಮೂಲಕ 22ನೇ ವಯಸ್ಸಿಗೆ ಚಂದ್ರಜ್ಯೋತಿ ಸಿಂಗ್ ಅವರು ಐಎಎಸ್ ಅಧಿಕಾರಿಯಾಗುತ್ತಾರೆ.
ಪ್ರಸ್ತುತ ಚಂದ್ರಜ್ಯೋತಿ ಅವರು ಪಂಜಾಬ್ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಮೊಹಾಲಿಯ ಎಸ್ಡಿಎಂ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.