ಹರಿಯಾಣ, ಜು.01(DaijiworldNews/AK):ಐಎಎಸ್ ಅಧಿಕಾರಿಗಳು ಕೆಲವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಅಂತಹ ಸಮರ್ಥ ಮಹಿಳಾ ಅಧಿಕಾರಿಗಳಲ್ಲಿ 'ಬ್ಯೂಟಿ ವಿತ್ ಬ್ರೈನ್' ಎಂದು ಕರೆಯಲ್ಪಡುವ ಐಎಎಸ್ ಸೋನಾಲ್ ಗೋಯಲ್ ಕೂಡ ಒಬ್ಬರು. ಅವರು ಯಶಸ್ಸಿನ ಹಾದಿಯನ್ನು ತಿಳಿಯೋಣ.
ಸೋನಾಲ್ ಗೋಯಲ್ 2008 ರ ಬ್ಯಾಚ್ ಐಎಎಸ್ ಅಧಿಕಾರಿ, ಪ್ರಸ್ತುತ ತ್ರಿಪುರಾ ಭವನದಲ್ಲಿ ರೆಸಿಡೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಐಎಎಸ್ ಸೋನಾಲ್ ಗೋಯೆಲ್ ಅವರು ಹರಿಯಾಣದ ಪಾಣಿಪತ್ನಲ್ಲಿ ಜನಿಸಿಸಿದ್ದಾರೆ.
ದೆಹಲಿಯಲ್ಲಿ ಅಧ್ಯಯನ ಮಾಡಿದರು.ಸೋನಾಲ್ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿ ಪಡೆದರು. ಸಿಎಸ್ ಓದುತ್ತಿರುವಾಗಲೇ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ್ದರು.ಕಂಪನಿಯೊಂದರಲ್ಲಿ ಕೆಲಕಾಲ ಕಂಪನಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಸೋನಾಲ್ ಗೋಯಲ್ 2006 ರಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾದರು. 2007 ರಲ್ಲಿ, ಅವರು ತಮ್ಮ ತಂತ್ರವನ್ನು ಬದಲಾಯಿಸಿದರು, ಮತ್ತೊಮ್ಮೆ ಪರೀಕ್ಷೆಯನ್ನು ತೆಗೆದುಕೊಂಡರು. ಇದರಲ್ಲಿ 13ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.