ದೆಹಲಿ, ಜು.02(DaijiworldNews/AA): ಯುಪಿಎಸ್ ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಅನೇಕ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೂರು ಅಥವಾ ನಾಲ್ಕು ಪ್ರಯತ್ನದ ಬಳಿಕ ಉತ್ತೀರ್ಣರಾಗುತ್ತಾರೆ. ಆದರೆ ಸೃಷ್ಟಿ ದಾಬಾಸ್ ಅವರು ತಮ್ಮ ಮೊದಲನೇ ಪ್ರಯತ್ನದಲ್ಲಿ ತರಬೇತಿ ಪಡೆಯದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉತ್ತೀರ್ಣರಾಗುತ್ತಾರೆ.
ಸೃಷ್ಟಿ ದಾಬಾಸ್ ದೆಹಲಿ ಮೂಲದವರಾಗಿದ್ದಾರೆ. ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಕೆಲಸ ಮಾಡಿದರು. ಪ್ರಸ್ತುತ ಮುಂಬೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ದಾಬಾಸ್ ನುರಿತ ಕಥಕ್ ನೃತ್ಯಗಾರ್ತಿಯೂ ಆಗಿದ್ದು, ಆಕೆಯು ವಿವಿಧ ಸಾಧನೆಗಳನ್ನು ಮಾಡಿರುತ್ತಾರೆ.
ಸೃಷ್ಟಿ ದಾಬಾಸ್ ಅವರು ಆರ್ಬಿಐನಲ್ಲಿ ಕೆಲಸ ಮಾಡುತ್ತಿರುವಾಗ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಅವರು ರಾತ್ರಿ ವೇಳೆ ಯುಪಿಎಸ್ ಸಿ ಪರೀಕ್ಷೆಗಾಗಿ ಓದುತ್ತಿದ್ದರು. 2023ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು 6 ನೇ ರ್ಯಾಂಕ್ ಪಡೆದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ.
ಸೃಷ್ಟಿ ಅವರು ಇನ್ ಸ್ಟಾಗ್ರಾಂನಲ್ಲಿ 30.1ಕೆ ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಚಿರಪರಿಚಿತರಾಗಿದ್ದಾರೆ.