ಕೇರಳ, ಜು 04(DaijiworldNews/AA): ಯುಪಿಎಸ್ ಸಿ ಪರೀಕ್ಷೆ ಬರೆಯಲು ಹಲವು ಅಭ್ಯರ್ಥಿಗಳು ನಾನಾ ರೀತಿಯ ತ್ಯಾಗ ಮಾಡುತ್ತಾರೆ. ಹೀಗೆ ರೇಣು ರಾಜ್ ಅವರು ಐಎಎಸ್ ಅಧಿಕಾರಿಯಾಗಲು ವೈದ್ಯ ವೃತ್ತಿಯನ್ನೇ ತೊರೆದರು.
ಕೇರಳದ ಕೊಟ್ಟಾಯಂನಲ್ಲಿ ಜನಿಸಿದ ರೇಣು ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದರು. ರೇಣು ಅವರು ಚಂಗನಾಶ್ಸೆರಿಯ ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದಿದರು. ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿಯನ್ನು ಗಳಿಸಿದರು.
ಶಸ್ತ್ರಚಿಕಿತ್ಸಕರಾಗಿ ಕೆಲಸ
ನಿರ್ವಹಿಸುತ್ತಿರುವಾಗಲೇ, ರೇಣು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಬಳಿಕ ತರಬೇತಿ ಪಡೆಯದೇ 2014ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 2ನೇ ರ್ಯಾಂಕ್ ಪಡೆಯುತ್ತಾರೆ.
ಪ್ರಸ್ತುತ, ವಯನಾಡಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಈಗ ಐಎಎಸ್ ಶ್ರೀರಾಮ್ ವೆಂಕಟರಾಮನ್ ಅವರನ್ನು ವಿವಾಹವಾಗಿದ್ದಾರೆ. ಇನ್ನು ಶ್ರೀರಾಮ್ ಅವರು 2012ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿದ್ದಾರೆ.