ಮಹಾರಾಷ್ಟ್ರ, ಜು.07(DaijiworldNews/AK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ಕೆಲವರು ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಕೆಲವರು ಮಾತ್ರ ಹಲವಾರು ಬಾರಿ ಪರೀಕ್ಷೆ ಬರೆದ ನಂತರ ಯುಪಿಎಸ್ ಸಿಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಐದು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಸ್ವಾತಿ ಮೋಹನ್ ರಾಥೋಡ್ ಅವರ ಯಶೋಗಾಥೆ ಇದು.
ಸ್ವಾತಿ ಮೋಹನ್ ರಾಥೋಡ್ ಅವರು ಮಹಾರಾಷ್ಟ್ರದ ಸೊಲ್ಲಾಪುರದವರು. ಸ್ವಾತಿ ಮೋಹನ್ ರಾಥೋಡ್ ಅವರು ತರಕಾರಿ ವ್ಯಾಪಾರಿಯ ಮಗಳಾಗಿದ್ದಾರೆ. ಅವರಿಗೆ ಮೂರು ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರನಿದ್ದಾನೆ.
ಸ್ವಾತಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಸರ್ಕಾರಿ ಶಾಲೆಯಲ್ಲಿ ಮುಗಿಸಿದರು. ನಗರದಲ್ಲಿ ಜೀವನ ನಡೆಸಲು ಅವರ ಕುಟುಂಬಕ್ಕೆ ಕಷ್ಟಕರವಾಗಿದ್ದರಿಂದ ಅವರ ಕುಟುಂಬವು ನಗರದಿಂದ 400 ಕಿ.ಮೀ ದೂರದಲ್ಲಿರುವ ಸೊಲ್ಲಾಪುರಕ್ಕೆ ಸ್ಥಳಾಂತರಗೊಳ್ಳುತ್ತಾರೆ.
ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಬಳಿಕ ಸೋಲ್ಲಾಪುರದ ವಾಲ್ಚಂದ್ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
ಆ ಸಮಯದಲ್ಲಿ ಆಕೆಗೆ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುವ ಹಂಬಲ ಉಂಟಾಗುತ್ತದೆ. ಐದನೇ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 492ನೇ ರ್ಯಾಂಕ್ ಪಡೆಯುವುದರೊಂದು ಉತ್ತೀರ್ಣರಾಗುತ್ತಾರೆ.
ನನ್ನ ತಾಯಿ ತನ್ನ ಚಿನ್ನವನ್ನು ಅಡಮಾನವಿಟ್ಟು, ನನ್ನ ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ. ನಾನು ಸಮಸ್ಯೆಗಳಿಗಿಂತ ಪರಿಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇನೆ ಮತ್ತು ಅವುಗಳನ್ನು ಪರಿಹಾರ ಕಂಡುಕೊಳ್ಳಲು ಕೆಲಸ ಮಾಡಿದ್ದೇನೆ ಎಂದು ಸ್ವಾತಿ ಅವರು ತಮ್ಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.