ಉತ್ತರ ಪ್ರದೇಶ,ಜು.08(DaijiworldNews/AK): ಇಂಜಿನಿಯರ್ ನಿಂದ ಐಪಿಎಸ್ ಅಧಿಕಾರಿಯಾಗುವವರೆಗೆ ಅಂಶಿಕಾ ಶರ್ಮಾ ಅವರ ಪಯಣವು ಕಠಿಣ ಪರಿಶ್ರಮಕ್ಕೆ ಉದಾಹರಣೆಯಾಗಿದೆ. ಅವರ ಯಶೋಗಾಥೆ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿ.
ಐಪಿಎಸ್ ಅಂಶಿಕಾ ಶರ್ಮಾ ಅವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ನಿವಾಸಿ. ಅವರ ತಂದೆ ಉತ್ತರ ಪ್ರದೇಶ ವಿದ್ಯುತ್ ನಿಗಮ್ ಲಿಮಿಟೆಡ್ ನ ನಿವೃತ್ತ ಉದ್ಯೋಗಿ, ತಾಯಿ ಗೃಹಿಣಿ.ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿರುವ ಅಂಶಿಕಾ 2020ರಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ನೋಯ್ಡಾದಲ್ಲಿ ಮಾಡಿದ್ದಾರೆ. 2014 ರಿಂದ 2018 ರವರೆಗೆ ನೋಯ್ಡಾದ ಗಾಲ್ಗೋಟಿಯಾಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.ಡಿಗ್ರಿ ಪಡೆದ ಒಂದು ವರ್ಷ ಬಳಿಕ 2019 ರಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ತೇರ್ಗಡೆಯಾಗಿಲ್ಲ.
UPSC ನಾಗರಿಕ ಸೇವೆಗಳ ಪರೀಕ್ಷೆಗಾಗಿ ಅವರ ಪ್ರಯಾಣವು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಿಂದ ಪ್ರಾರಂಭವಾಯಿತು. ಅಂಶಿಕಾ ಯಾವುದೇ ಕೋಚಿಂಗ್ ಇಲ್ಲದೆ, ತನ್ನ ಎರಡನೇ ಪ್ರಯತ್ನದಲ್ಲಿ UPSC CSE ಪರೀಕ್ಷೆಯಲ್ಲಿ 136 ನೇ ರ್ಯಾಂಕ್ ಗಳಿಸುವುದರಲ್ಲಿ ಯಶಸ್ಸು ಆದರು.