ನವದೆಹಲಿ,ಮೇ16(DaijiworldNews/AZM):ಇನ್ನೂ 25 ವರ್ಷಗಳ ಕಾಲ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರ ಭವಿಷ್ಯವಾಣಿಯಂತೆ ಇನ್ನೂ -'ದೇಶದ ಪ್ರತಿಯೋರ್ವ ಬಡವ ತನ್ನ ಮನೆಗೆ ಯಾವ ದಿನ ಶೌಚಾಲಯ ಹೊಂದುತ್ತಾನೋ ಮತ್ತು ಆತನ ಇಂಧನ ಅಗತ್ಯವನ್ನು ಯಾವಾಗ ಪೂರೈಸಲಾಗುವುದೋ ಆಗ ಯಾರೇ ಪ್ರಧಾನಿಯಾಗಿರಲಿ ಅವರು ಈ ದೇಶವನ್ನು ಕನಿಷ್ಠ 25 ವರ್ಷಗಳ ಕಾಲ ಆಳುತ್ತಾರೆ' ಎಂದು ಲೋಕಸಭೆಯಲ್ಲಿ ಹೇಳಿದ್ದರು.
ಈ ಕುರಿತು ಪಿಟಿಐಗೆ ಸಂದರ್ಶನ ನೀಡಿದ ಯೋಗಿ,ಪ್ರಧಾನಿ ನರೇಂದ್ರ ಮೋದಿ ಬಡಜನರಿಗೆ ಶೌಚಾಲಯ ಮತ್ತು ಇಂಧನ ಅವಶ್ಯಕತೆ ಪೂರೈಕೆಗೆ ಆದ್ಯತೆ ನೀಡುತ್ತಿದ್ದು, ಇದೇ ಕಾರಣಕ್ಕಾಗಿ ಅವರು ಇನ್ನೂ ೨೫ವರ್ಷ ದೇಶದ ಆಡಳಿತ ನಡೆಸಲಿದ್ದಾರೆ ಎಂದರು.
"ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಅವರು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ -'ದೇಶದ ಪ್ರತಿಯೋರ್ವ ಬಡವ ತನ್ನ ಮನೆಗೆ ಯಾವ ದಿನ ಶೌಚಾಲಯ ಹೊಂದುತ್ತಾನೋ
ಮತ್ತು ಆತನ ಇಂಧನ ಅಗತ್ಯವನ್ನು ಯಾವಾಗ ಪೂರೈಸಲಾಗುವುದೋ ಆಗ ಯಾರೇ ಪ್ರಧಾನಿಯಾಗಿರಲಿ ಅವರು ಈ ದೇಶವನ್ನು ಕನಿಷ್ಠ 25 ವರ್ಷಗಳ ಕಾಲ ಆಳುತ್ತಾರೆ' ಎಂದು ಲೋಕಸಭೆಯಲ್ಲಿ ಹೇಳಿದ್ದರು. ಡಾ. ಲೋಹಿಯಾ ಅವರ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ನನಸಾಗಿದೆ. ಹಾಗಾಗಿ 201ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಗಳಿಸಿ ಸರ್ಕಾರ ರಚಿಸಲಿದೆ" ಎಂದು ಆದಿತ್ಯನಾಥ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019ರ ರಾಜಕೀಯ ಸಮರ ಕಡೆಯ ಹಂತಕ್ಕೆ ತಲುಪಿದ್ದು, ಮೇ 19ರಂದು 8 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಅಂತಿಮ ಹಂತದಲ್ಲಿ ಮತದಾನ ನಡೆಯಲಿದೆ. ಏತನ್ಮಧ್ಯೆ, ಸುದ್ದಿ ಸಂಸ್ಥೆ ಪಿಟಿಐಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂದರ್ಶನ ನೀಡಿದ್ದರು
ಬಡಜನರಿಗೆ ಶೌಚಾಲಯ ಮತ್ತು ಇಂಧನ ಅವಶ್ಯಕತೆ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಅವರು ಮತ್ತಷ್ಟು ವರ್ಷ ದೇಶದ ಆಡಳಿತ ನಡೆಸಲಿದ್ದಾರೆ ಎಂದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದಲ್ಲಿನ 80 ಸ್ಥಾನಗಳ ಪೈಕಿ ಬಿಜೆಪಿ 74 ಸ್ಥಾನಗಳನ್ನುಗೆಲ್ಲಲಿದೆ. 2014ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆದ್ದಿದ್ದ ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.