ದೆಹಲಿ, ಜು 11(DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಇದರಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಕೆಲ ಅಭ್ಯರ್ಥಿಗಳು ತಮ್ಮ ಮೊದಲನೇ ಪ್ರಯತ್ನದಲ್ಲೇ ಉತ್ತೀರ್ಣರಾದರೆ, ಇನ್ನು ಕೆಲವರು ಹಲವು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ 5ನೇ ಪ್ರಯತ್ನದಲ್ಲಿ ಉತ್ತಿರ್ಣರಾದ ಅಂಶಿಕಾ ಜೈನ್ ಅವರ ಯಶೋಗಾಥೆ ಇದು.
ಅಂಶಿಕಾ ಅವರು ದೆಹಲಿ ಮೂಲದವರು. ಅಂಶಿಕಾ ತನ್ನ 5 ನೇ ವಯಸ್ಸಿನಲ್ಲಿ ತನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡರು. ನಂತರ ಅವರು ತನ್ನ ಅಜ್ಜಿ ಹಾಗೂ ಚಿಕ್ಕಪ್ಪನ ಜೊತೆಗೆ ಬೆಳೆದರು. ಶಿಕ್ಷಕಿಯಾಗಿದ್ದ ಅಜ್ಜಿ ಅಂಶಿಕಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣದ ಮಹತ್ವವನ್ನು ಕಲಿಸಿದರು.
ಅಂಶಿತಾ ಅವರು ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಬಿ.ಕಾಂ ಮಾಡಿದರು. ನಂತರ ಎಂ.ಕಾಂ ಮಾಡುತ್ತಿದ್ದ ವೇಳೆ ಯುಪಿಎಸ್ಸಿ ಗೆ ತಯಾರಿ ಕೂಡ ಆರಮಭಿಸಿದರು. ತನ್ನ ಪದವಿಯ ನಂತರ, ಅವರು ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗವನ್ನು ಪಡೆದರು. ಆದರೆ ಅವಳು ಅದನ್ನು ತಿರಸ್ಕರಿಸಿದಳು ಮತ್ತು ತನ್ನ ಯುಪಿಎಸ್ಸಿ ತಯಾರಿಯನ್ನು ಪುನರಾರಂಭಿಸಿದಳು.
ದುರದೃಷ್ಟವಶಾತ್, ಯುಪಿಎಸ್ಸಿಗೆ ತಯಾರಿ ನಡೆಸುತ್ತಿರುವಾಗಲೇ ಅಂಶಿಕಾ ತನ್ನ ಅಜ್ಜಿಯನ್ನು ಕಳೆದುಕೊಂಡರು. ಆದರೆ ಇದರಿಂದ ದೃತಿಗೆಡದೇ ಅವರು, ಮತ್ತೆ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. ಸ್ವಯಂ ಅಧ್ಯಯನ ಆರಂಭಿಸಿದ ಅವರು ತಮ್ಮ ನಾಲ್ಕು ಪ್ರಯತ್ನಗಳಲ್ಲಿ ಪರೀಕ್ಷೆಯನ್ನು ಭೇದಿಸಲು ವಿಫಲರಾಗುತ್ತಾರೆ.
ಆದರೆ ಅಂತಿಮವಾಗಿ, 2022 ರಲ್ಲಿ ಐದನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅಂಶಿಕಾ ಅವರು 306 ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.