ಶಿರಸಿ, ಜು 11(DaijiworldNews/ AK): ನಾನು ಸಮಾಜವಾದಿ ಎನ್ನುವ ಸಿಎಂ ಸಿದ್ದರಾಮಯ್ಯ ವಿವಿಧ ಭ್ರಷ್ಟ ಹಗರಣಗಳಲ್ಲಿ ಭಾಗಿಯಾಗಿ 'ಮಜಾವಾದಿ' ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಸೂಕ್ತ ಕಾಲ ಇದಾಗಿದೆ ಎಂದು ಸಂಸದ ವಿಶ್ವೇ ಶ್ವರ ಹೆಗಡೆ ಕಾಗೇ ರಿ ಹೇಳಿದರು.
ನಗರದ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದಲ್ಲಿ ₹187 ಕೋ ಟಿ ಹಗರಣ ನಡೆದಿದ್ದು, ಸಚಿವರ ತಲೆದಂಡವಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವರೂ ಆಗಿದ್ದಾರೆ. ಸರ್ಕಾರದ ಅಧಿಕೃತ ಖಾತೆಯಿಂದ ಬೇರೆ ಖಾತೆಗೆ ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆದರೆ ಸಿಎಂ ಗಮನಕ್ಕೆ ಬಂದಿಲ್ಲವೇ ? ಹಾಗಾಗಿ ಈ ಭ್ರಷ್ಟತೆ ನಡೆಯಲು ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರಾಗಿದ್ದಾರೆ. ಸರ್ಕಾರದ ವ್ಯವಸ್ಥೆಯನ್ನೇ ಭ್ರಷ್ಟಾಚಾರಕ್ಕೆ ಬಳಸಿಕೊಂಡ ರೀತಿ ಕಾಂಗ್ರೆಸ್ ಭ್ರಷ್ಟತೆಯ ದಾಹಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಮುಡಾ ಭ್ರಷ್ಟಾಚಾರ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಸ್ವತಃ ಸಿಎಂ ಹಾಗೂ ಸಚಿವ ಭೈರತಿ ಸುರೇ ಶ ಮುಂ ದಾಗಿದ್ದಾರೆ. ಅಧಿಕಾರಿಗಳ ತಲೆದಂಡದ ಮೂಲಕ ತಾವು ಬಚಾವಾಗಲು ನೋ ಡುತ್ತಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಹಗರಣ, ಮುಡಾ ಹಗರಣದಲ್ಲಿ ನೇರ ಪಾತ್ರವಿರುವ ಸಿಎಂ ಸಿದ್ದರಾಮಯ್ಯ ತಕ್ಷಣ ರಾಜೀ ನಾಮೆ ನೀಡಬೇಕು. ಇವೆರಡೂ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.