ಲಾಹೋರ್, ಮೇ 16(DaijiworldNews/AZM): ಭಾರತದಲ್ಲಿ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಹೊಸ ಸರ್ಕಾರ ರಚನೆಯಾಗುವವರೆಗೂ ಭಾರತಕ್ಕೆ ವಿಮಾನ ಹಾರಾಟ ನಡೆಸದಿರಲು ಪಾಕಿಸ್ತಾನ ನಿರ್ಧರಿಸಿದೆ.
ಮಾರ್ಚ್ 27ರಂದು ದೆಹಲಿ, ಬ್ಯಾಂಕಾಕ್ ಹಾಗೂ ಕೌಲಾಲಂಪುರ್ ಹೊರತುಪಡಿಸಿ ವಿಮಾನ ಹಾರಾಟ ಉಳಿದೆಲ್ಲೆಡೆ ಆರಂಭಿಸಿತ್ತು.ಇದೀಗ ಮೇ 30ರವರೆಗೂ ಭಾರತಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಿದೆ.
ಚುನಾವಣೆ ಮುಗಿದು ದೇಶದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಭಾರತಕ್ಕೆ ವಿಮಾನ ಹಾರಾಟ ನಡೆಸಬೇಕೋ ಎನ್ನುವುದನ್ನು ಯೋಚನೆ ಮಾಡೋಣ ಎಂದು ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಹಾದ್ ಚೌದರಿ ತಿಳಿಸಿದ್ದಾರೆ.
ಫೆಬ್ರವರಿ 26ರಂದು ಜೈಷ್-ಎ-ಮೊಹಮ್ಮದ್ ಉಗ್ರರ ನೆಲೆ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ದುರ್ಬಲಗೊಂಡಿತ್ತು. ಭಾರತಕ್ಕೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಈವರೆಗೂ ಭಾರತ-ಪಾಕ್ ಸಂಬಂಧದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಹಾಗಾಗಿ ಭಾರತದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಭಾರತಕ್ಕೆ ವಿಮಾನ ಹಾರಾಟ ನಡೆಸುವುವ ಕುರಿತು ಚಿಂತಿಸುವುದಾಗಿ ಪಾಕ್ ಹೇಳಿದೆ.