ನವದೆಹಲಿ,ಜು. 15(DaijiworldNews/AK): UPSC ಪರೀಕ್ಷೆ ಮತ್ತು ರಾಜ್ಯ ಪಿಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಹಿಳಾ ಅಧಿಕಾರಿಯದ ಮಣಿ ಅರೋರಾ ಬಗ್ಗೆ ತಿಳಿಯೋಣ.
ಮಣಿ ಅರೋರಾ, ಇತ್ತೀಚೆಗೆ ಮೊರಾದಾಬಾದ್ನಲ್ಲಿ ಹೆಚ್ಚುವರಿ ಮುನ್ಸಿಪಲ್ ಮ್ಯಾಜಿಸ್ಟ್ರೇಟ್ ನೇಮಕವಾಗಿದ್ದಾರೆ. ಇದಕ್ಕೂ ಮುನ್ನ ಆಕೆಯನ್ನು ಮೊರಾದಾಬಾದ್ ಸದರ್ನಲ್ಲಿ ಎಸ್ಡಿಎಂ ಆಗಿ ನೇಮಿಸಲಾಗಿತ್ತು.ಮಣಿ ಅರೋರಾ, ಬಳಿಕ ಮೊರಾದಾಬಾದ್ನಲ್ಲಿ ಹೆಚ್ಚುವರಿ ಮುನ್ಸಿಪಲ್ ಮ್ಯಾಜಿಸ್ಟ್ರೇಟ್ ನೇಮಕವಾಗಿದ್ದಾರೆ. ಇದಕ್ಕೂ ಮುನ್ನ ಆಕೆಯನ್ನು ಮೊರಾದಾಬಾದ್ ಸದರ್ನಲ್ಲಿ ಎಸ್ಡಿಎಂ ಆಗಿ ನೇಮಿಸಲಾಗಿತ್ತು.
ಅವರು ಯಾವಾಗಲೂ ಅಧ್ಯಯನದಲ್ಲಿಯೂ ಮುಂಚೂಣಿಯಲ್ಲಿದ್ದರು. ಅವರು ತಮ್ಮ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿಯಲ್ಲಿ 2ನೇ ರ್ಯಾಂಕ್ ಪಡೆದರು. ಅವರ ತಂದೆ ಮಗಳ ಯುಪಿಎಸ್ಗೆ ಸಿದ್ಧರಾಗಲು ಬ್ಯಾಂಕ್ನಿಂದ ಪರ್ಸನಲ್ ಲೋನ್ ತೆಗೆದುಕೊಂಡಿದ್ದರು.
ಮಣಿ ಅರೋರಾ UPSC ಪರೀಕ್ಷೆಗೆ ಮೂರು ಬಾರಿ ಪ್ರಯತ್ನಿಸಿದ್ದರು. ಮೊದಲೆರಡು ಬಾರಿ ಸಿಕ್ಕ ರ್ಯಾಂಕ್ ಉತ್ತಮವಾಗಿರಲಿಲ್ಲ. 2017 ರಲ್ಲಿ ಮೂರನೇ ಬಾರಿಗೆ ಅವರು ಅಖಿಲ ಭಾರತ 360 ರ್ಯಾಂಕ್ ಗಳಿಸಿದ್ದರು. ನಂತರ ಅವರು IRAS ಅಧಿಕಾರಿಯಾಗಿ ಆಯ್ಕೆಯಾದರು.
ಕೆಲಸ ಮಾಡುತ್ತಲೇ ಅವರು UPPCS ಪರೀಕ್ಷೆಯನ್ನು ಸಹ ಎದುರಿಸಿದ್ದರು. IRAS ತರಬೇತಿಯ ಸಮಯದಲ್ಲಿ, UPPCS ಫಲಿತಾಂಶವನ್ನು ಸಹ ಬಿಡುಗಡೆ ಮಾಡಲಾಯಿತು, ಅದರಲ್ಲಿ ಅವರು 24 ನೇ ರ್ಯಾಂಕ್ ಗಳಿಸಿದ್ದರು. ನಂತರ ಅವರು ಜಿಲ್ಲಾಧಿಕಾರಿಯಾಗಿ ಆಯ್ಕೆಯಾದರು.