ಬೆಂಗಳೂರು,ಮೇ 16 (Daijiworld News/MSP): ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತನಾಗಿದ್ದು, ಈತನ ಗಡಿಪಾರು ಪ್ರಕರಣದ ವಿಚಾರಣೆ ಸೆನೆಗಲ್ ನ ನ್ಯಾಯಾಲಯದಲ್ಲಿ ಬುಧವಾರ ಆರಂಭವಾದ ಬೆನ್ನಲ್ಲೇ ಆರೋಪಿಯನ್ನು ರಾಜ್ಯಕ್ಕೆ ಕರೆತರುವ ಬಗ್ಗೆ ರಾಜ್ಯ ಪೊಲೀಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಈಗಾಗಲೇ ಸೆನಗಲ್ ನಲ್ಲಿ ಕಾನೂನು ಪ್ರಕ್ರಿಯೆ ಆರಂಭವಾಗಿದ್ದು, ಮೋಸ್ಟ್ ವಾಂಟೆಡ್ ರವಿ ಪೂಜಾರಿಯನ್ನು ವಾಪಾಸ್ ಕರೆತರುವ ವಿಶ್ವಾಸದಲ್ಲಿ ರಾಜ್ಯ ಪೊಲೀಸರಿದ್ದಾರೆ. ಮಾತ್ರವಲ್ಲದೆ ರಾಜ್ಯ ಪೊಲೀಸರು ಇದಕ್ಕೆ ಅಗತ್ಯವಿರುವ ಸೂಕ್ತ ಸಾಕ್ಷ್ಯಧಾರಗಳನ್ನು ಒದಗಿಸಿದ್ದಾರೆ.
ಹಫ್ತಾ ವಸೂಲಿ, ಕೊಲೆ ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಸಿಸಿಬಿಯ ಹಿಟ್ ಲಿಸ್ಟ್ ನಲ್ಲಿ ಅಗ್ರ ಸಾಲಿನಲ್ಲಿದ್ದ. ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ. ರವಿ ಪೂಜಾರಿ ಬರೋಬ್ಬರಿ 15 ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಜನವರಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಈತ ಸೆನಗಲ್ ನ ಬುರ್ಕಿನ್ ಪಾಸೋದಲ್ಲಿ ಆಂಟೋನಿ ಫರ್ನಾಂಡಿಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ.