ಬೆಂಗಳೂರು, ಜು. 17(DaijiworldNews/AA): ಕಾರವಾರದ ಅಂಕೋಲಾ ಶಿರೂರು ಬಳಿ ನಿನ್ನೆ ನಡೆದ ಗುಡ್ಡ ಕುಸಿತ ಘಟನೆಗೆ ಸಂಬAಧಿಸಿದAತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಡ್ಡ ಕುಸಿತ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಯೇ ಕಾರಣ. ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ರಸ್ತೆ ಮಾಡಿದ್ದ ಕಂಪನಿ ಐಆರ್ಬಿ ಕಂಪನಿ ಮೇಲೆ ಒತ್ತಡ ತಂದು 8-10 ಜೆಸಿಬಿ, ಇಟಾಚಿ ಬಳಸಿ ರಸ್ತೆ ಕ್ಲಿಯರ್ ಮಾಡೋ ಕೆಲಸ ಮಾಡಿದ್ದೇವೆ. ಬಹುತೇಕ ರಸ್ತೆ ಕ್ಲೀಯರ್ ಮಾಡುವ ಕೆಲಸ ಆಗಿದೆ. ರಸ್ತೆ ಕ್ಲೀಯರ್ ಮಾಡಿದ ಬಳಿಕ ಸಂಚಾರಕ್ಕೆ ಬಿಡಬೇಕಾ ಅಂತ ಪೊಲೀಸ್ ಮತ್ತು ನ್ಯಾಷನಲ್ ಹೈವೇ ಅವರು ತೀರ್ಮಾನಿಸುತ್ತಾರೆ. ಗುಡ್ಡ ಇನ್ನು ತೇವಾಂಶ ಇರುವುದರಿಂದ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಸೇಫ್ಟಿ ಎಂಜಿನಿಯರ್ ಗಳು ಪರಿಶೀಲಿಸಿದ ಬಳಿಕ ತೀರ್ಮಾನಿಸುತ್ತೇವೆ ಎಂದರು.
ಒಂದೇ ಕುಟುಂಬದ ಐವರು ಮಣ್ಣಿನಡಿ ಸಿಲುಕಿರುವ ಅಥವಾ ಸಾವನ್ನಪ್ಪಿರುವ ಶಂಕೆ ಇದೆ. ಮೂರು ಮೃತದೇಹಗಳು ಇದುವರೆಗೆ ಸಿಕ್ಕಿವೆ, ಎನ್ ಡಿಅರ್ ಎಫ್, ಎಸ್ ಡಿಆರ್ ಎಫ್, ಕಂದಾಯ ಇಲಾಖೆ ಮತ್ತು ಪೊಲೀಸ್ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದರು.
ಪತ್ತೆಯಾಗಿರುವ ಟ್ಯಾಂಕರ್ ಅಲ್ಲದೆ ಇನ್ನೊಂದು ಟ್ಯಾಂಕರ್ ಕೂಡ ಗಂಗಾವಳಿ ನದಿಯಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ. ಆದರೆ ಹೆಚ್ ಪಿ ಸಿಎಲ್, ಬಿಪಿಸಿಎಲ್ ಅಥವಾ ಬೇರೆ ಯಾವುದೇ ಸಾರಿಗೆ ಕಂಪನಿ ಇದುವರೆಗೆ ದೂರು ಸಲ್ಲಿಸಿಲ್ಲ. ನೀರಲ್ಲಿ ಬಿದ್ದಿರುವ ಟ್ಯಾಂಕರ್ ನಿಂದ ಲೀಕ್ ಆಗುತ್ತಿದ್ದ ಗ್ಯಾಸ್ ಅನ್ನು ಕಂಪನಿಯವರು ನಿಲ್ಲಿಸಿದ್ದಾರೆ. ಗ್ಯಾಸ್ ನಿಂದ ಸುತ್ತಮುತ್ತಲಿನ ಜನಕ್ಕೆ ಅನಾಹುತ ಸಂಭವಿಸುವ ಸಾಧ್ಯತೆ ಇರೋದ್ರಿಂದ ಅದನ್ನು ಸುರಕ್ಷಿತವಾಗಿ ತೆರವು ಮಡುವ ಜವಾಬ್ದಾರಿಯನ್ನು ಗ್ಯಾಸ್ ಕಂಪನಿಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.