ಕಾರವಾರ, ಜು.21(DaijiworldNews/AA): ಗುಡ್ಡ ಕುಸಿದು ಎರಡು ದಿನಗಳಿಂದ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ಮಾರ್ಗ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಸಮೀಪ ಗುಡ್ಡ ಕುಸಿದಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮರ ಹಾಗೂ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭಗೊಂಡಿದೆ.
ಕುಮಟಾ-ಸಿದ್ದಾಪುರ ರಸ್ತೆಯ ಮೇಲೆ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಮರ, ಮಣ್ಣು ಕುಸಿದು ಬಿದ್ದಿತ್ತು. ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿದ ಪರಿಣಾಮ ಕುಮಟಾ-ಸಿದ್ದಾಪುರ ರಸ್ತೆಯನ್ನು 2 ದಿನಗಳ ಕಾಲ ಬಂದ್ ಮಾಡಲಾಗಿತ್ತು. ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದೀಗ ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭಗೊಂಡಿದೆ.