ನವದೆಹಲಿ, ಜು 22 (DaijiworldNews/MS): ಭಾರತೀಯ ಆರ್ಥಿಕತೆಯು ಸಾಂಕ್ರಾಮಿಕ ನಂತರದ ಕ್ರಮಬದ್ಧ ಶೈಲಿಯಲ್ಲಿ ಚೇತರಿಸಿಕೊಂಡಿದೆ ಮತ್ತು ವಿಸ್ತರಿಸಿದೆ ಮತ್ತು 2023-24ರಲ್ಲಿ ನೈಜ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಪೂರ್ವದ ಮಟ್ಟಕ್ಕಿಂತ 20 ಶೇಕಡಾ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ 2024-25 ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.6.5-7 ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ ಎಂದು ಇಂದಿನ ಆರ್ಥಿಕ ಸರ್ವೆಯ ವರದಿಯಲ್ಲಿ ತಿಳಿದುಬಂದಿದೆ.
ಪ್ರತಿ ವರ್ಷ ಬಜೆಟ್ ಮಂಡನೆಗೂ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಇಂದು ಬಜೆಟ್ಗೆ ಪೂರ್ವಭಾವಿಯಾಗಿ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ್ದಾರೆ.
ಸಮೀಕ್ಷೆಯ ದಾಖಲೆಯ ಪ್ರಕಾರ, "ಭೌಗೋಳಿಕ ರಾಜಕೀಯ, ಹಣಕಾಸು ಮಾರುಕಟ್ಟೆ ಮತ್ತು ಹವಾಮಾನ ಅಪಾಯಗಳಿಗೆ ಒಳಪಟ್ಟು FY25 ಮೀರಿದ ಬಲವಾದ ಬೆಳವಣಿಗೆಯ ನಿರೀಕ್ಷೆಗಳು ಉತ್ತಮವಾಗಿ ಕಾಣುತ್ತವೆ" ಎಂದು ಆರ್ಥಿಕ ಸಮೀಕ್ಷೆಯು ಗಮನಿಸಿದೆ.ಎಲ್ಲಾ ಕೌಶಲ್ಯ ಮಟ್ಟಗಳಲ್ಲಿ ಕಾರ್ಮಿಕರ ವಲಯಕ್ಕೆ ಸಂಬಂಧಿಸಿದಂತೆ AI ಅನಿಶ್ಚಿತತೆಯ ದೊಡ್ಡ ಪಲ್ಲಟವನ್ನು ಉಂಟುಮಾಡುತ್ತದೆ. ಭಾರತ ಬೇಳೆಕಾಳುಗಳಲ್ಲಿ ನಿರಂತರ ಕೊರತೆಯನ್ನು ಎದುರಿಸುತ್ತಿದೆ ಮತ್ತು ಅದರ ಪರಿಣಾಮವಾಗಿ ಬೆಲೆ ಒತ್ತಡಗಳನ್ನು ಎದುರಿಸುತ್ತಿದೆ ಇತ್ಯಾದಿ ಅಂಶಗಳು ಈ ವರದಿಯಲ್ಲಿದೆ.
ಅಂದಹಾಗೆ ಆರ್ಥಿಕ ಸಮೀಕ್ಷೆಯು ವಾರ್ಷಿಕ ದಾಖಲೆಯಾಗಿದ್ದು ಅದು ಕಳೆದ ವರ್ಷದಲ್ಲಿ ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಅಲ್ಪಾವಧಿಯಿಂದ ಮಧ್ಯಮ ಅವಧಿಯ ನಿರೀಕ್ಷೆ ಗಳಿಗೆ ಒಳನೋಟಗಳನ್ನು ನೀಡುತ್ತದೆ.
ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವಾಲಯದ ಅಡಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಅರ್ಥಶಾಸ್ತ್ರ ವಿಭಾಗವು ವಾರ್ಷಿಕವಾಗಿ ಬಿಡುಗಡೆ ಮಾಡುತ್ತದೆ.