ಬೆಂಗಳೂರು, ಜು.23(DaijiworldNews/AA): ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ನಾಗೇಂದ್ರ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚಲು ಗಿಫ್ಟ್ ಕೂಪನ್ ಹಂಚಿಕೆ ಮಾಡಿದ್ದರು ಎಂದು ಇಡಿ ಆರೋಪ ಮಾಡಿದೆ.
ನಾಗೇಂದ್ರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಾಗ ಇಡಿ ರಿಮ್ಯಾಂಡ್ ಕಾಪಿ ಸಲ್ಲಿಸಿತ್ತು. ಈ ರಿಮ್ಯಾಂಡ್ ಕಾಪಿಯಲ್ಲಿ ನಾಗೇಂದ್ರ ಬಳಿ 3 ಮೊಬೈಲ್ಗಳು ಇದ್ದವು. ಹಗರಣ ಬೆಳಕಿಗೆ ಬಂದ ಬಳಿಕ ನಾಶ ಮಾಡಿದ್ದಾರೆ. ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹಣದ ರಾಶಿ ಸುರಿದಿರುವುದಕ್ಕೆ ಪೂರಕವಾದ ಡಿಜಿಟಲ್ ಸಾಕ್ಷ್ಯ ಮತ್ತು ಫೋಟೋ ದೊರೆತಿದೆ. ಆದರೆ ಇದನ್ನು ನಾಗೇಂದ್ರ ಒಪ್ಪಿಕೊಂಡಿಲ್ಲ ಎಂದಿದೆ.
ಹೈದರಾಬಾದ್ನಲ್ಲಿ ಲಿಕ್ಕರ್ ವ್ಯಾಪಾರಿಗಳೊಂದಿಗೆ ಡೀಲ್ ಮಾಡಿದ್ದಾರೆ. ಹಣವನ್ನು ವ್ಯಾಪಾರಿಗಳಿಂದ ಪಡೆದುಕೊಂಡಿದ್ದು ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹೈದರಾಬಾದ್ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ಕೂಪನ್ ನೀಡಲಾಗಿದೆ. 1.40 ಕೋಟಿ ರೂ. ಮೌಲ್ಯದ ಕೂಪನ್ ನೀಡಿರೋದಕ್ಕೆ ಪೂರಕ ಸಾಕ್ಷ್ಯ ದೊರೆತಿದೆ ಎಂದು ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.