ನವದೆಹಲಿ, ಜು 23(DaijiworldNews/AK): ನೀಟ್ಯುಜಿ 2024ಮರುಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋಟ್ ತಿರಸ್ಕರಿಸಿದೆ. ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಗೆ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿತು.ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಯನ್ನು ತೋರಿಸಲು ತನ್ನ ಮುಂದೆ ಇರುವ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಪೀಠ ಹೇಳಿದೆ.
ನೀಟ್ಯುಜಿ 2024 2024 ರ ರದ್ದತಿಗೆ ಆದೇಶ ನೀಡುವುದು ನ್ಯಾಯಸಮ್ಮತವಲ್ಲ. ಪರೀಕ್ಷೆಯ ಫಲಿತಾಂಶವು ದುರ್ಬಲವಾಗಿದೆ ಅಥವಾ ಪರೀಕ್ಷೆಯ ವ್ಯವಸ್ಥಿತ ಉಲ್ಲಂಘನೆಯಾಗಿದೆ ಎಂಬ ತೀರ್ಮಾನಕ್ಕೆ ಕಾರಣವಾಗಲು ದಾಖಲೆಯಲ್ಲಿ ಸಾಕಷ್ಟು ಸಾಕ್ಷಿಗಳ ಕೊರತೆ ಇದೆ.
ವಿವಾದಾತ್ಮಕ ಪ್ರಶ್ನೆಗೆ ಸರಿಯಾದ ಉತ್ತರವನ್ನು ದೆಹಲಿಯ ಐಐಟಿ ಸಮಿತಿಯಿಂದ ಕೋರ್ಟ್ ಮಾಹಿತಿ ಪಡೆದು ಒಪ್ಪಿಕೊಂಡಿದೆ. ಈ ಆಧಾರದ ಮೇಲೆ ಫಲಿತಾಂಶಗಳನ್ನು ಮರು ಲೆಕ್ಕಾಚಾರ ಮಾಡಲು ಎನ್ಟಿಎಗೆ ನಿರ್ದೇಶನ ನೀಡಲಾಗಿದೆ.