ಹುಬ್ಬಳ್ಳಿ, ಮೇ17(Daijiworld News/SS): ಮಹಾತ್ಮ ಗಾಂಧಿಯನ್ನು ಕೊಂದವರನ್ನು ಸಮರ್ಥಿಸುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೇಶದ ಸ್ವತಂತ್ರ್ಯಕ್ಕಾಗಿ ಗಾಂಧೀಜಿ ಮಾಡಿದ ಹೋರಾಟವನ್ನು ವಿಶ್ವವೇ ಮೆಚ್ಚುತ್ತಿದೆ. ಆದರೆ ಮೋದಿ ಅವರು ಸೋಲಿನ ಹತಾಶೆಯಿಂದ ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್ ಕುಮಾರ ಕಟೀಲ್, ಅನಂತಕುಮಾರ ಹೆಗಡೆ ಗಾಂಧಿ ಕೊಂದವರನ್ನು ಸಮರ್ಥಿಸುವ ಮೂಲಕ ಅವರ ಸಂಸ್ಕೃತಿ, ಮನದಲ್ಲಿದ್ದದ್ದನ್ನು ತಿಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬರು ಪಕ್ಷೇತರರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಬೆಂಬಲಿಸುತ್ತಿದ್ದಾರೆ. ತುಳಜಪ್ಪ ದಾಸರ, ಸಿದ್ದಪ ಕೊಡಿ ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬ ಪಕ್ಷೇತರ ಅಭ್ಯರ್ಥಿಯು ಬೆಂಬಲಿಸುವ ವಿಶ್ವಾಸವಿದೆ ಎಂದು ತಿಳಿಸಿದರು.