ದೆಹಲಿ, ಜು 25(DaijiworldNews/ AK): ರಾಜಕೀಯದಲ್ಲಿ ಇಷ್ಟವಾಗುವುದು ಮತ್ತು ಇಷ್ಟವಿಲ್ಲದಿರುವುದನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ನಡೆಸಿದರೆ ಅವರನ್ನು ಪ್ರತ್ಯೇಕವಾಗಿ ದೂರವಿಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ ಹಂಚಿಕೆ ಕುರಿತು ಪ್ರಧಾನಿ ಮೇಲೆ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ಪಿಎಂ ಮೋದಿ ಮಿತ್ರಪಕ್ಷಗಳನ್ನು ಒಲಿಸಿಕೊಳ್ಳುವ ಮೂಲಕ ತಮ್ಮ ಆಡಳಿತವನ್ನು ಉಳಿಸಬಹುದು. ಆದರೆ ದೇಶವನ್ನು ಉಳಿಸುವುದಿಲ್ಲ ಎಂದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಬಜೆಟ್ನಲ್ಲಿ ಕೇಂದ್ರದಿಂದ ಇತರ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದ ಕೆಲವೇ ಗಂಟೆಗಳ ನಂತರ ಸ್ಟಾಲಿನ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಅದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿದವರ ಮೇಲೆ ಮೋದಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ.
ಕೇಂದ್ರ ಹಣಕಾಸು ವರದಿಯಲ್ಲಿ ಹಲವು ರಾಜ್ಯಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಇಂಡಿಯಾ ಬಣದ ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣೆ ಮುಗಿದಿದೆ, ಈಗ ನಾವು ದೇಶದ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದೀರಿ. ಆದರೆ ನಿನ್ನೆಯ ಬಜೆಟ್ 2024 ನಿಮ್ಮ ಆಡಳಿತವನ್ನು ಉಳಿಸುತ್ತದೆ ದೇಶವನ್ನಲ್ಲ.ನಿಮ್ಮನ್ನು ಸೋಲಿಸಿದವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ. ನೀವು ರಾಜಕೀಯ ಇಷ್ಟ, ಇಷ್ಟವಿಲ್ಲದಿರುವಿಕೆ ಆಧರಿಸಿ ಸರ್ಕಾರ ನಡೆಸಬೇಡಿ, ಹಾಗೆ ಮಾಡಿದರೆ ನಿಮ್ಮನ್ನೇ ನಾವು ಪ್ರತ್ಯೇಕವಾಗಿರಿಸುತ್ತೇವೆ ಎಂದು ಸ್ಟಾಲಿನ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.