ಕಾರವಾರ, ಜು.26(DaijiworldNews/AA): ಅಂಕೋಲ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದ ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ 11 ಜನರ ಪೈಕಿ ೩ ಮಂದಿಗಾಗಿ ನಿವೃತ್ತ ಸೇನಾಧಿಕಾರಿ ಇಂದ್ರಬಾಲ ತಂಡದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶೋಧ ಕಾರ್ಯದ ವೆಲೆ ನದಿಯಲ್ಲಿ ಮೂರು ಕಬ್ಬಿಣದ ವಸ್ತು ಪತ್ತೆಯಾಗಿದ್ದು, ಈ ಪೈಕಿ ಒಂದು ಲಾರಿ ಇರುವುದು ಪತ್ತೆಯಾಗಿದೆ.
ಸದ್ಯ ಪತ್ತೆಯಾಗಿರುವ ಲಾರಿಯ ಸಮೀಪ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾರಿಯಲ್ಲಿ ಅರ್ಜುನ ಪತ್ತೆ ಮಾಡುವುದು ಇನ್ನಷ್ಟು ಕಷ್ಟವಾಗಿದೆ. ನದಿಯ ನೀರಿನ ರಭಸವು ಗರಿಷ್ಠ 3 ನಾಟ್ಸ್ ಇದ್ದಾಗ ಧೈರ್ಯ ಮಾಡಿ ನೀರಿನಲ್ಲಿ ಇಳಿಯಬಹುದು. ಆದರೆ ಇದೀಗ ಗಂಗಾವಳಿ ನದಿಯ ನೀರಿನ ರಭಸ 8 ನಾಟ್ಸ್ ಇದೆ. ಜೊತೆಗೆ ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದ ಗಂಗಾವಳಿ ನದಿಯ ರಭಸ ಹೆಚ್ಚುತ್ತಲೇ ಇದೆ. ಹೀಗಾಗಿ ಮುಳುಗು ತಜ್ಞರನ್ನು ಕಳಿಹಿಸಿದರೂ ಅವರು ಕೂಡ ಬದಕುಳಿಯುವುದು ಕಷ್ಟ ಎನ್ನಲಾಗುತ್ತಿದೆ.
ಡ್ರೋನ್ ಹಾಗೂ ಥರ್ಮಲ್ ಸ್ಕ್ಯಾನ್ ಕಾರ್ಯಾಚರಣೆ ನಡೆಸಿದ ಖಾಸಗಿ ಕಂಪನಿಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ಪ್ರಕಾರ, ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಮೂರು ಸ್ಪಾಟ್ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ಸಿಗಬೇಕಿದೆ. 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದ್ದು, 400 ಲಾಗ್ಸ್ ಟ್ರಕ್ನಲ್ಲಿದ್ದದ್ದರಿಂದ ಹೆಚ್ಚು ಆಳದಲ್ಲಿ ಇರುವ ಸಾಧ್ಯತೆಗಳಿತ್ತು. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ ಎಂದು ಮಾಹಿತಿ ನೀಡಿದ್ದಾರೆ.