ನವದೆಹಲಿ, ಜು 25(DaijiworldNews/ AK): ಮುಡಾ ನಿವೇಶ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಕೂಡ ಕೇಳಿ ಬಂದಿದೆ. ಹೀಗಾಗಿ ಈ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸಿವೆ.
ಈ ಮಧ್ಯೆ ತಮ್ಮ ಮೇಲಿನ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಹಗರಣದ ಬಗ್ಗೆ ಮಾಹಿತಿ ನೀಡಿದರು. ಮುಡಾ ನಿವೇಶ ಪಡೆದುಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಹೆಸರು ಸಹ ಇದೆ ಎಂದು ದಾಖಲೆ ನೀಡಿದರು.
ಇದಕ್ಕೆ ಕುಮಾರಸ್ವಾಮಿ ಅವರು ನವದೆಹಲಿಯಿಂದ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಲ್ಲಿ ಏನೆಲ್ಲ ನಡೆದಿದೆ. ತೆಗೆದರೆ ಬ್ರಹ್ಮಾಂಡ ಇದೆ. 2017 ರಲ್ಲಿ ಮತ್ತೊಂದು ಪತ್ರ ಬರೆದಿದ್ದೆ. ಸಾರಾ ಮಹೇಶ ನ್ಯಾಯವಾದ ಸೈಟ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು, ಅದಕ್ಕಾಗಿ ಪತ್ರ ಬರೆದೆ. 40 ವರ್ಷ ಆದರೂ ನನಗೆ ಬದಲಿ ನಿವೇಶನ ನೀಡಿಲ್ಲ. ದುಡ್ಡು ಕೊಟ್ಟರೂ ನನಗೆ ಈವರೆಗೂ ನಿವೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
2017 ರಲ್ಲಿ ಹಂಚಿಕೆಯಾದ ನಿವೇಶನದಲ್ಲಿ 8000 ಚದರಾಡಿ ಕಡಿಮೆಯಾಗಿದೆ ಎಂದು ಮೂಡಾ ಹೇಳಿತ್ತು. ನಾನು ಸಾಮಾನ್ಯ ಪ್ರಜೆ. ಪ್ರಜೆಯಾಗಿ ಒಂದು ಅರ್ಜಿ ಹಾಕಲು ಅಧಿಕಾರ ಇಲ್ವಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನನ್ನ ಪರಿಸ್ಥಿತಿ ಹೀಗೆ ಆದರೆ ಬಡವರ ಪರಿಸ್ಥಿತಿ ಏನು? ಯಾವ ತನಿಖೆ ಮಾಡ್ತೀರಿ, ಮುಡಾ ನಿವೇಶ ಸಿದ್ದರಾಮಯ್ಯ ಮಗ, ಹೆಂಡತಿ ಹೆಸರಿಗೆ ಅಥವಾ ಬೈರತಿ ಸುರೇಶ್ ಹೆಸರಿಗೆ ಬರೆಯುತ್ತೇನೆ ಎಂದು ಹೇಳಿದರು.
ಅಂದಿನಿಂದಲೂ ಈ ಆರೋಪ ನಡೆಯುತ್ತಿದೆ. ಸಿಐಡಿ ಲೋಕಾಯುಕ್ತ ತನಿಖೆ ನಡೆದಿದೆ. ಐದನೂರಕ್ಕೂ ಹೆಚ್ಚಿನ ನಿವೇಶನ ಪಡೆದಿದೆ ಎಚ್ಡಿಡಿ ಕುಟುಂಬ ಎಂದು ಆರೋಪ ಮಾಡಿದ್ದರು. ಎಲ್ಲ ತನಿಖೆ ಮಾಡಿದ ಬಳಿಕವೂ ಸಾಬೀತಾಗಿಲ್ಲ. ಹೆಚ್ಡಿ ದೇವೇಗೌಡರು ಒಂದು ಸೈಟಿಗೆ ಮನವಿ ಮಾಡಿದ್ದರು. ನಮ್ಮ ಚಿಕ್ಕಮನಿಗೆ ಸೈಟು ಕೊಡಿ ಎಂದು ಮನವಿ ಮಾಡಿದ್ದರು. ಯಡಿಯೂರಪ್ಪ ಕಾಲದಲ್ಲೂ ತನಿಖೆ ಆಯ್ತು, ಏನು ಆಗಲಿಲ್ಲ ಎಂದರು.
14 ಅಲ್ಲ 24, ಅಲ್ಲ 44 ಸೈಟು ತೆಗೆದುಕೊಳ್ಳಿ. ಕಾನೂನಿನ ವ್ಯಾಪ್ತಿಯಲ್ಲಿದ್ದರೆ ತಗೊಳ್ಳಿ ನನ್ನ ತಕರಾರು ಇಲ್ಲ. 16/2 ಆದ್ಮೇಲೆ ಆ ಜಮೀನು ಸರ್ಕಾರದ್ದು. ಭೂ ಸ್ವಾಧೀನದಿಂದ ಕೈ ಬಿಟ್ಟು ವಶಪಡಿಸಿಕೊಂಡಿದ್ದೀರಿ. ಡಿ ನೋಟೀಪಿಕೇಷನ್ ಗೆ ಅರ್ಜಿ ಕೊಟ್ಟಿದ್ದ ಯಾರು? 1992ರಲ್ಲಿ ಅರ್ಜಿ ಕೊಟ್ಟಿದ್ದಾರೆ. ನಿಂಗ ಯಾವಗ ತೀರಿಕೊಂಡ, ತೀರಿಕೊಂಡವರ ಹೆಸರಿಗೆ ಡಿನೋಟಿಫೈ ಮಾಡಿದ್ದಾರೆ. ಇದರ ಬಗ್ಗೆ ಜನರಿಗೆ ಹೇಳಿ ಸಿದ್ದರಾಮಯ್ಯ ಅವರೇ ಎಂದು ಸವಾಲು ಹಾಕಿದರು.