ಮೈಸೂರು, ಜು.28(DaijiworldNews/AA): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಂಜನಗೂಡು ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗಾಗಿ ಬಂದರೂ ಬಾಗಿಲು ಬೀಗ ತೆಗೆಯದೆ ಅಧಿಕಾರಿಗಳು ಅವಮಾನ ಮಾಡಿ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ.
ಹೆಚ್ಡಿಕೆ ಅವರು ಇಂದು ನಂಜನಗೂಡು ಪ್ರವಾಸದಲ್ಲಿದ್ದು, ಕೆಲ ನಿಮಿಷಗಳ ವಿಶ್ರಾಂತಿಗಾಗಿ ನಂಜನಗೂಡು ಪ್ರವಾಸಿ ಮಂದಿರಕ್ಕೆ ತೆರಳಿದ್ದರು. ಹೆಚ್ಡಿಕೆ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು. ಆದರೂ ಹೆಚ್ಡಿಕೆ ಅವರು ತೆರಳುವ ವೇಳೆಗೆ ಪ್ರವಾಸಿ ಮಂದಿರದ ಬೀಗ ಹಾಕಲಾಗಿತ್ತು.
ಪ್ರವಾಸಿ ಮಂದಿರದ ಹೊರ ಭಾಗದಲ್ಲೇ ಕಾರಿನಲ್ಲಿ ಹೆಚ್ಡಿಕೆ ಅವರು 10 ನಿಮಿಷ ಕಾದರು. ಆದರೂ ಯಾವೊಬ್ಬ ಅಧಿಕಾರಿಗಳು ಬಂದಿರಲಿಲ್ಲ. ಕಾದು ಸುಸ್ತಾದ ಹೆಚ್ಡಿ ಕುಮಾರಸ್ವಾಮಿ ಬಳಿಕ ಅಲ್ಲಿಂದ ತೆರಳಿದರು ಎಂದು ತಿಳಿದುಬಂದಿದೆ.