ಆಂಧ್ರ ಪ್ರದೇಶ,ಮೇ18(Daijiworldnews/AZM):ಈಗಾಗಲೇ ಎನ್ ಡಿಎಯೇತರ ಪಕ್ಷಗಳನ್ನು ಒಗ್ಗೂಡಿಸಿ ಮಹಾಘಟಬಂಧನ ನಿರ್ಮಿಸಲು ಮುಂದಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.
ಎನ್ ಡಿಎಯೇತರ ಪಕ್ಷಗಳನ್ನು ಒಗ್ಗೂಡಿಸಿ ನಿರ್ಮಿಸಲು ಯತ್ನಿಸುತ್ತಿರುವ ಮಹಾಘಟಬಂಧನದ ಹಿನ್ನಲೆ ಇಂದು ಮಹತ್ವದ ಸಭೆ ನಡೆಯಲಿದ್ದು, ಊ ಹಿನ್ನಲೆ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ನಂತರ ಉತ್ತರ ಪ್ರದೇಶದ ಲಕ್ನೋಕ್ಕೆ ತೆರಳಿ ಅಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ನಾಯ್ಡು ಭೇಟಿ ಮಾಡಲಿದ್ದಾರೆ.
ಅಷ್ಟೇ ಅಲ್ಲ, ತೆಲುಗು ದೇಶಂ ಪಕ್ಷದ ನಾಯಕ ನಾಯ್ಡೂ ಅವರು ಎನ್ ಸಿಪಿ ಮುಖಂಡ ಶರದ್ ಪವಾರ್, ಸಿಪಿಐ ಮುಖಂಡ ಸುರವರಂ ಸುಧಾಕರ್ ರೆಡ್ಡಿ, ಎಲ್ ಜೆಡಿ ನಾಯಕ ಶರದ್ ಯಾದವ್ ಅವರನ್ನೂ ನಾಯ್ಡು ಭೇಟಿ ಮಾಡಲಿದ್ದಾರೆ. ಈಗಾಗಲೇ ವಿವಿಪ್ಯಾಟ್ ಕುರಿತು ತಗಾದೆ ತೆಗೆದಿರುವ ಚಂದ್ರಬಾಬು ನಾಯ್ಡು ಅ ವರು, ಆಂಧ್ರಪ್ರದೇಶದ ಐದು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ ನೀಡಿರುವ ಚುನಾವಣಾ ಆಯೋಗದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈಗಾಗಲೇ ಸಿತಾರಾಮ್ ಯೆಚೂರಿ ಅವರನ್ನು ನಾಯ್ಡು ಭೇಟಿ ಮಾಡಿದ್ದು, ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.