ಚೆನ್ನೈ, ಜು.30(DaijiworldNews/AK): ತಮಿಳು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಆಗಿರುವ ತಂದೆಯ ಹಾದಿಯನ್ನು ಅನುಸರಿಸುವ ಬದಲು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ ಐಎಎಸ್ ಅಧಿಕಾರಿ ಶ್ರುತಂಜಯ್ ನಾರಾಯಣನ್ ಯಶೋಕಥೆ ಇಲ್ಲಿದೆ.
ಭಾರತದ ಚಿತ್ರೋದ್ಯಮಗಳಲ್ಲಿ ನಟಿಸಿರುವ ಹೆಸರಾಂತ ನಟರ ಮಕ್ಕಳು ಸಹ ತಮ್ಮ ತಂದೆ-ತಾಯಿಯ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಉದಾಹರಣೆಗಳಿವೆ. ಭಾರತದಲ್ಲಿ ಪ್ರಸ್ತುತವಾಗಿರುವ ಎಲ್ಲಾ ಭಾಷೆಯ ಚಿತ್ರೋದ್ಯಮಗಳಲ್ಲಿಯೂ ಸಹ ನಟ ನಟಿಯ ಮಕ್ಕಳಲ್ಲಿ ಒಬ್ಬರಾದರೂ ಸಿನೆಮಾ ವೃತ್ತಿಜೀವನಕ್ಕೆ ಬಂದಿರುವುದು ಇದೆ.
ಕೆಲವರು ತಮ್ಮ ಪೋಷಕರಂತೆ ನಟ ನಟಿಯರಾದರೆ, ಇನ್ನೂ ಕೆಲವರು ಸಿನೆಮಾ ವೃತ್ತಿಜೀವನದ ಅನೇಕ ವಿಭಾಗಗಳಾದ ನಿರ್ದೇಶನ, ನಿರ್ಮಾಪಕ, ಛಾಯಾಗ್ರಹಣ, ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಆಗಿರುವ ತಂದೆಯ ಹಾದಿಯನ್ನು ಅನುಸರಿಸುವ ಬದಲು ಐಎಎಸ್ ಅಧಿಕಾರಿಯಾಗಿದ್ದಾರೆ.
ಐಎಎಸ್ ಅಧಿಕಾರಿ ಶ್ರುತಂಜಯ್ ನಾರಾಯಣನ್ ಅವರು ಹೆಸರಾಂತ ತಮಿಳು ನಟ ಚಿನ್ನಿ ಜಯಂತ್ ಅವರ ಮಗ. ಚಿನ್ನಿ ಜಯಂತ್ ಅವರ ನಿಜವಾದ ಹೆಸರು ಕೃಷ್ಣಮೂರ್ತಿ ನಾರಾಯಣನ್ . ಇವರು ತಮಿಳು ಚಿತ್ರರಂಗದಲ್ಲಿ ಚಿನ್ನಿ ಜಯಂತ್ ಎಂದು ತುಂಬಾನೇ ಚಿರಪರಿಚಿತರು, ರಜನಿಕಾಂತ್ ನಟಿಸಿದ 80ರ ದಶಕದ ಚಲನಚಿತ್ರಗಳಲ್ಲಿ ಹಾಸ್ಯಮಯ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾದವರು.
ಬಾಲ್ಯದಿಂದಲೂ, ಶ್ರುತಂಜಯ್ ನಾರಾಯಣನ್ ಅವರು ಅನೇಕ ಕಾರ್ಯಕ್ರಮಗಳು ಮತ್ತು ನಾಟಕಗಳಲ್ಲಿ ಪ್ರದರ್ಶನ ನೀಡಲು ಇಷ್ಟಪಟ್ಟರು ಮತ್ತು ಪ್ರೌಢಾವಸ್ಥೆಯಲ್ಲಿ ಉತ್ತಮವಾಗಿ ರಂಗಭೂಮಿಯಲ್ಲಿ ಮುಂದುವರೆದರು. ಅದೇ ಸಮಯದಲ್ಲಿ, ಅವರು ತಮ್ಮ ಪದವಿಯನ್ನು ಆಗಿನ ಮದರಾಸಿನ ಗಿಂಡಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಅವರ ಸ್ನಾತಕೋತ್ತರ ಪದವಿಗಾಗಿ ಅವರು ಪ್ರಸಿದ್ಧ ಅಶೋಕ ವಿಶ್ವವಿದ್ಯಾಲಯಕ್ಕೆ ಹೋದರು.
ಅವರ ಕಠಿಣ ಪರಿಶ್ರಮದ ಫಲವಾಗಿ ಅವರು ಐಎಎಸ್ ಅಧಿಕಾರಿ ಶ್ರುತಂಜಯ್ ನಾರಾಯಣನ್ ಆದರು. 2015 ರಲ್ಲಿ 75ನೇ ರ್ಯಾಂಕ್ ಪಡೆಯುವುದರೊಂದಿಗೆ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದರು.
ಆದರೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಗಲಿಲ್ಲ. ಅವರು ತಮ್ಮ 2ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾದರು. ಐಎಎಸ್ ಅಧಿಕಾರಿ ಶ್ರುತಂಜಯ್ ನಾರಾಯಣನ್ ಅವರು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಅಡಿಷ್ನಲ್ ಕಲೆಕ್ಟರ್ ಆಗಿ ಆಗಿ ನೇಮಕಗೊಂಡರು.